Select Your Language

Notifications

webdunia
webdunia
webdunia
webdunia

ಮೇಕೆದಾಟು ಪಾದಯಾತ್ರೆಗೆ ನಮಗೆ ಭಯವಿಲ್ಲ - ಆರ್. ಅಶೋಕ್

ಮೇಕೆದಾಟು ಪಾದಯಾತ್ರೆಗೆ ನಮಗೆ ಭಯವಿಲ್ಲ - ಆರ್. ಅಶೋಕ್
ಬೆಂಗಳೂರು , ಗುರುವಾರ, 30 ಡಿಸೆಂಬರ್ 2021 (15:34 IST)
ಕಾಂಗ್ರೆಸ್ ಮೇಕಾದಾಟು ಪಾದಯಾತ್ರೆಯಿಂದ ನಮಗೆ ಯಾವುದೇ ಭಯವಿಲ್ಲ ಎಂದು ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಾದಯಾತ್ರೆ ಒಂದು ದೊಂಬರಾಟ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಡಿಕೆಶಿ ನೀರಾವರಿ ಸಚಿವರಾಗಿದ್ದರು ಆಗ ಕಡಲೆಕಾಯಿ ತಿನ್ನತಿದ್ರಾ ?
ಮೇಕೆ ಮಾಂಸ ತಿನ್ನಲು ಚುನಾವಣೆ ಯಾತ್ರೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಯಾಕೆ ಮೇಕೆದಾಟು ಯೋಜನೆ ಮಾಡಲಿಲ್ಲ. ರಾಜ್ಯದಲ್ಲಿ 6 ವರ್ಷ ಕಾಂಗ್ರೆಸ್ ಸರ್ಕಾರ ಇದ್ದಾಗ ಯಾಕೆ ಯೋಜನೆ ಬಗ್ಗೆ ಯೋಚನೆ ಮಾಡಲಿಲ್ಲ. ಅಧಿಕಾರವಿದ್ದಾಗ ಏನೂ ಮಾಡದೆ ಈಗ ಮೇಕೆದಾಟು ನಂದು ಅಂತ ಹೇಳಿಕೊಂಡು ಓಡಾಡ್ತಿದ್ದಾರೆ ಎಂದು ಅಶೋಕ್ ಟೀಕೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಬಾರಿ ಕಾಂಗ್ರೆಸ್ ಗೆಲುತ್ತೆ ನೋಡಿ