Publish Date: Thu, 30 Dec 2021 (10:10 IST)
Updated Date: Thu, 30 Dec 2021 (10:19 IST)
ತಿರುವನಂತಪುರಂ: ಹೆತ್ತಮ್ಮನಿಗೆ ಯಾರೇ ಏನೇ ಮಾಡಿದರೂ ಮಕ್ಕಳು ಅದನ್ನು ಸಹಿಸಲಾರರು. ಇಂತಹದ್ದೇ ಒಂದು ಘಟನೆ ದುರಂತ ಅಂತ್ಯ ಕಂಡಿದೆ.
ಕೇರಳದ ವಯನಾಡು ಜಿಲ್ಲೆಯಲ್ಲಿ ತಾಯಿಯ ಮೇಲೆ ಹಲ್ಲೆ ಮಾಡಲು ಬಂದ 70 ವರ್ಷ ವ್ಯಕ್ತಿಯನ್ನು ಬಾಲಕಿಯರಿಬ್ಬರು ಕೊಂದು ಮೃತದೇಹವನ್ನು ಬಾವಿಗೆ ಎಸೆದು ಆಕ್ರೋಶ ತೀರಿಸಿಕೊಂಡಿದ್ದಾರೆ.
ಮೊದಲು ಬಾಲಕಿಯರು ವ್ಯಕ್ತಿಯನ್ನು ತಡೆಯಲು ಮುಂದಾಗಿದ್ದಾರೆ. ಆದರೂ ಆತ ತಾಯಿ ಮೇಲೆ ಹಲ್ಲೆ ನಡೆಸುವುದನ್ನು ನಿಲ್ಲಿಸಲಿಲ್ಲ. ಇದರಿಂದಾಗಿ ಬಾಲಕಿಯರು ಕೊಡಲಿ ತೆಗೆದುಕೊಂಡು ವ್ಯಕ್ತಿಗೆ ಹೊಡೆದಿದ್ದಾರೆ. ಪರಿಣಾಮ ಆತನ ಸಾವನ್ನಪ್ಪಿದ್ದಾನೆ. ಘಟನೆ ಬಳಿಕ ಬಾಲಕಿಯರು ಪೊಲೀಸರ ಮುಂದೆ ಶರಣಾಗಿದ್ದಾರೆ.