Select Your Language

Notifications

webdunia
webdunia
webdunia
webdunia

ಪ್ರೇಯಸಿಯನ್ನು ನೋಡಲು ಬಂದ ಯುವಕ ಹೆಣವಾದ!?

ಪ್ರೇಯಸಿಯನ್ನು ನೋಡಲು ಬಂದ ಯುವಕ ಹೆಣವಾದ!?
ತಿರುವನಂತಪುರಂ , ಗುರುವಾರ, 30 ಡಿಸೆಂಬರ್ 2021 (09:09 IST)
ತಿರುವನಂತಪುರಂ :  ತನ್ನ ಗೆಳತಿಯನ್ನು ಭೇಟಿಯಾಗಲು ಸಿನಿಮೀಯ ರೀತಿಯಲ್ಲಿ ಮನೆಗೆ ಬಂದಿದ್ದಾನೆ. ಮನೆಯ ಮಂದಿ ಎಲ್ಲಾ ಮಲಗಿದ್ದಾಗ ತನ್ನ ಪ್ರೇಯಸಿಯನ್ನು ಅಚ್ಚರಿ ಮಾಡುವ ಆತನ ಯೋಜನೆ ಕೈಕೊಟ್ಟಿದೆ.
 
ದುರದೃಷ್ಟ ಎಂದರೆ, ಪ್ರೇಯಸಿಯ ತಂದೆಯೇ ಆತನನ್ನು ಕಳ್ಳ  ಎಂದು ಇರಿದು ಕೊಂದಿರುವ ಘಟನೆ ತಿರುವನಂತಪುರಂದಲ್ಲಿ ನಡೆದಿದೆ. ಇಂದು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.

ಯುವಕನ ಕೊಂದ ಬಳಿಕ ಯುವತಿ ತಂದೆ ಚಾಲಕುಡಿ ಲೈನ್ ನಿವಾಸಿ ಲಾಲನ್ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡು, ಪೊಲೀಸರಿಗೆ ಶರಣಾಗಿದ್ದಾರೆ. ರಾತ್ರಿ ತನ್ನ ಮಗಳ ಕೊಠಡಿಯಿಂದ ಶಬ್ದ ಕೇಳಿದ ನಂತರ ಕೋಣೆಯನ್ನು ತೆರೆದಿದ್ದೇನೆ ಎಂದು ಲಾಲನ್ ಪೊಲೀಸರಿಗೆ ತಿಳಿಸಿದ್ದಾರೆ.

ಕೊಠಡಿಯಿಂದ ಶಬ್ದ ಕೇಳಿ ಬಾಗಿಲು ಬಡಿದರೂ ಕೊಠಡಿ ತೆರೆಯಲಿಲ್ಲ. ನಂತರ ಲಾಲನ್ ಮನೆಯಲ್ಲಿ ತಡಕಾಡಿದ್ದು,  ಈ ವೇಳೆ ಆತನನ್ನು ಕಳ್ಳ ಎಂದು ಭಾವಿಸಿ ಚಾಕುವಿನಿಂದ ಚುಚ್ಚಿ ಕೊಂದಿರುವುದಾಗಿ ಅವರು ತಿಳಿಸಿದ್ದಾರೆ. ಈ ಸುದ್ದಿ ತಿಳಿದ ತಕ್ಷಣಕ್ಕೆ ಯುವಕನನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ದುರದೃಷ್ಟವಶಾತ್ ಯುವಕ ಆಸ್ಪತ್ರೆಗೆ ಸಾಗಿಸುವ ಮೊದಲೇ ಉಸಿರು ಚೆಲ್ಲಿದ್ದಾನೆ. ಮೃತದೇಹವನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಘಟನೆಯ ಕುರಿತು ಪೊಲೀಸರು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ವಿವರವಾದ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ನಂತರ ಪ್ರತಿಕ್ರಿಯೆ ನೀಡುವುದಾಗಿ ಸಿಐ ಮಾಧ್ಯಮಗಳಿಗೆ ತಿಳಿಸಿದರು.

ಕಳ್ಳ ಎಂದು ಯುವಕನ ಕೊಲೆ

ಲಾಲನ್, ಯುವಕನನ್ನು ಕಳ್ಳನೆಂಬ ಶಂಕೆಯ ಮೇರೆಗೆ ದಾಳಿ ನಡೆಸಿ ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾನೆ ನಡೆಸಿರುವುದಾಗಿ ಲಾಲನ್ ತಿಳಿಸಿರುವುದಾಗಿ ಪೊಲೀಸರನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಮನೆಯಲ್ಲಿ ಎಲ್ಲರೂ ಮಲಗಿರುವಾಗ ಏನೋ ಸದ್ದು ಕೇಳಿ ಬಂದಿತು.

ಗಾಬರಿಗೆ ಒಳಗಾದ ನಾನು ಚಾಕು ಹಿಡಿದು ಮನೆಯಲ್ಲಿ ಓಡಾಡಿದೆ. ಈ ವೇಳೆ ಮಗಳ ಕೋಣೆಗೆ ಹೋದೆ ಬಾಗಿಲು ಬಂದ್ ಆಗಿತ್ತು. ಸದ್ದು ಅಲ್ಲಿಂದಲೇ ಬರುತ್ತಿದ್ದ ಹಿನ್ನಲೆ ಬಾಗಿಲು ಓಡಿದು ನುಗ್ಗಿದೆ. ಈ ವೇಳೆ ಯುವಕನನ್ನು ಕಳ್ಳ ಎಂದು ಆತ ತಮಗೆ ಹಾನಿ ಮಾಡುತ್ತಾನೆ ಎಂದು ಭಾವಿಸಿ ಚುಚ್ಚಿರುವುದಾಗಿ ತಿಳಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಆನ್​​ಲೈನ್​​ನಲ್ಲಿ ಹೆಚ್ಚು ಆರ್ಡರ್ ಮಾಡಿದ ಫುಡ್ ಯಾವುದು?