Publish Date: Wed, 29 Dec 2021 (14:32 IST)
Updated Date: Wed, 29 Dec 2021 (16:34 IST)
ತಿರುವನಂತಪುರಂ : ತಮ್ಮ ತಾಯಿಯ ಮೇಲೆ ಹಲ್ಲೆಗೆ ಯತ್ನಿಸಿದ 70 ವರ್ಷದ ವ್ಯಕ್ತಿಯನ್ನು ಬಾಲಕಿಯರು ಕೊಲೆ ಮಾಡಿದ ಘಟನೆ ಕೇರಳದ ವಯನಾಡ್ ಜಿಲ್ಲೆಯ ಅಂಬಲವಾಯಲ್ ಪ್ರದೇಶದಲ್ಲಿ ನಡೆದಿದೆ.
ಮಹಮ್ಮದ್ ಕೋಯಾ (70) ಮೃತ ದುರ್ದೈವಿ. ತಮ್ಮ ತಾಯಿಗೆ ಹೊಡೆಯಲು ಬಂದಾಗ ಬಾಲಕಿಯರು ಮೊದಲಿಗೆ ತಡೆಯಲು ಮುಂದಾಗಿದ್ದಾರೆ.
ತಡೆಯಲು ಎಷ್ಟೇ ಪ್ರಯತ್ನಿಸಿದರೂ ವ್ಯಕ್ತಿ ಹೊಡೆಯುವುದನ್ನು ನಿಲ್ಲಿಸಿರಲಿಲ್ಲ. ಇದರಿಂದ ಕೋಪಗೊಂಡ ಹುಡುಗಿಯರು ಕೋಯಾನನ್ನು ಕೊಡಲಿಯಿಂದ ಹೊಡೆದು ಕೊಂದು ಶವವನ್ನು ಬಾವಿಗೆ ಎಸೆದಿದ್ದಾರೆ.
ಘಟನೆಯ ಬಳಿಕ ಬಾಲಕಿಯರು ವ್ಯಕ್ತಿಯನ್ನು ಕೊಂದಿರುವುದಾಗಿ ಪೊಲೀಸರ ಬಳಿ ಶರಣಾಗಿದ್ದಾರೆ. ನಂತರ ಶವವನ್ನು ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.