ಮಧ್ಯಪ್ರದೇಶ: ಅಪ್ರಾಪ್ತೆಯ ಶೀಲ ಕೆಡಿಸಿದ ದುರುಳರು ಆಕೆಯನ್ನು ಕೊಲೆ ಮಾಡಿ ಮನೆಯ ಮಾಡಿನಲ್ಲಿ ನೇತು ಹಾಕಿದ ಘಟನೆ ಮಧ‍್ಯಪ್ರದೇಶದಲ್ಲಿ ನಡೆದಿದೆ.
ಘಟನೆ ಸಂಬಂಧ ನೆರೆಮನೆಯಾತನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬಾಲಕಿಯ ಮೃತದೇಹವನ್ನು ಬಟ್ಟೆಯಲ್ಲಿ ಸುತ್ತಿ ಆಕೆಯ ಮನೆ ಮಾಡಿನ ಮೇಲೆಯೇ ಹಾಕಲಾಗಿತ್ತು.
ಶನಿವಾರದಿಂದ ಬಾಲಕಿ ನಾಪತ್ತೆಯಾಗಿದ್ದಳು. ಆಕೆಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಬಳಿಕ ಪೊಲೀಸರಿಗೆ ದೂರು ನೀಡಿದ್ದರು.