Publish Date: Mon, 27 Dec 2021 (10:05 IST)
Updated Date: Mon, 27 Dec 2021 (10:13 IST)
ಚೆನ್ನೈ: ತಾಯಿಯ ಸಮಾಧಿಯಿಂದ ಮೃತದೇಹ ತೆಗೆದು ಮನೆಯಲ್ಲಿಟ್ಟುಕೊಂಡ ಪುತ್ರನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ಮಾನಸಿಕ ಅಸ್ವಸ್ಥನೆನ್ನಲಾದ ವ್ಯಕ್ತಿ ಯಾರಿಗೂ ತಿಳಿಯದ ಹಾಗೆ ತಾಯಿಯ ಅರ್ಧಕೊಳೆತ ಮೃತದೇಹವನ್ನು ಮನೆಗೆ ತಂದಿಟ್ಟುಕೊಂಡು ಸಂರಕ್ಷಿಸುವ ಹುನ್ನಾರದಲ್ಲಿದ್ದ.
ವಿಚಾರ ತಿಳಿದ ಸ್ಥಳೀಯರು ಆತನನ್ನು ತಡೆಯಲು ಯತ್ನಿಸಿದ್ದರು. ಬಳಿಕ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ ಮತ್ತು ಪುತ್ರನನ್ನು ವಶಕ್ಕೆ ಪಡೆದಿದ್ದಾರೆ.