Publish Date: Sun, 26 Dec 2021 (10:03 IST)
Updated Date: Sun, 26 Dec 2021 (10:04 IST)
ಚಿಕ್ಕಬಳ್ಳಾಪುರ: ಇಬ್ಬರು ಮಕ್ಕಳ ತಂದೆಯೊಬ್ಬ 16 ವರ್ಷದ ಅಪ್ರಾಪ್ತೆಯ ಜೊತೆ ಮದುವೆಯಾಗಿ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
10 ನೇ ತರಗತಿ ಓದುತ್ತಿದ್ದ ಬಾಲಕಿ ಕೆಲವು ದಿನಗಳಿಂದ ಶಾಲೆಗೆ ಬರುತ್ತಿರಲಿಲ್ಲ. ಶಿಕ್ಷಕರು ಪೋಷಕರಿಗೆ ಸೂಚಿಸಿದರೂ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಬಾಲಕಿಯ ಮನೆಗೆ ಭೇಟಿ ನೀಡಿದಾಗ ಮೂರು ತಿಂಗಳ ಹಿಂದೆ ಪೋಷಕರೇ ಇಬ್ಬರು ಮಕ್ಕಳ ತಂದೆಗೆ ಮದುವೆ ಮಾಡಿಕೊಟ್ಟಿರುವುದು ಬಯಲಾಗಿದೆ.
ಈ ಸಂಬಂಧ ಶಿಕ್ಷಕರೇ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರಿಗೆ ಮೊದಲನೇ ಹೆಂಡತಿ ತೀರಿಕೊಂಡಿದ್ದ, ಇಬ್ಬರು ಮಕ್ಕಳ ತಂದೆಯ ಜೊತೆ ಮದುವೆ ಮಾಡಿಸಿರುವುದು ಗೊತ್ತಾಗಿದೆ. ಈ ಸಂಬಂಧ ಈಗ ಪೋಷಕರು ಮತ್ತು ಪತಿಯನ್ನು ಬಂಧಿಸಲಾಗಿದೆ.