Select Your Language

Notifications

webdunia
webdunia
webdunia
webdunia

ಅಂಕಲ್ ಎಂದು ಕರೆದಿದ್ದಕ್ಕೆ ಯುವತಿಯ ಮೇಲೆ ಹಲ್ಲೆ

ಅಂಕಲ್ ಎಂದು ಕರೆದಿದ್ದಕ್ಕೆ ಯುವತಿಯ ಮೇಲೆ ಹಲ್ಲೆ
ಉತ್ತರಾಖಂಡ , ಭಾನುವಾರ, 26 ಡಿಸೆಂಬರ್ 2021 (08:40 IST)
ಉತ್ತರಾಖಂಡ: 18 ವರ್ಷದ ಯುವತಿ ತನ್ನನ್ನು ಅಂಕಲ್ ಎಂದು ಕರೆದಿದ್ದಕ್ಕೆ ಸಿಟ್ಟಿಗೆದ್ದ 35 ವರ್ಷದ ವ್ಯಕ್ತಿ ಆಕೆಯ ಮೇಲೆ ಹಲ್ಲೆ ನಡೆಸಿದ ಘಟನೆ ಉತ್ತರಾಖಂಡ್ ನಲ್ಲಿ ನಡೆದಿದೆ.

ಆರೋಪಿ ಕ್ರೀಡಾ ಪರಿಕರಗಳ ಅಂಗಡಿ ಇಟ್ಟುಕೊಂಡಿದ್ದ. ಆತನ ಅಂಗಡಿಯಿಂದ ಬ್ಯಾಡ್ಮಿಂಟನ್ ಬ್ಯಾಟ್ ಖರೀದಿಸಿದ್ದ ಯುವತಿ ಅದರಲ್ಲಿ ದೋಷವಿದೆ ಎಂದು ಮರಳಿಸಲು ಅಂಗಡಿಗೆ ಬಂದಿದ್ದಳು. ಈ ವೇಳೆ ಆಕೆ ಅಂಗಡಿ ಮಾಲಿಕನನ್ನು ಅಂಕಲ್ ಎಂದು ಕರೆದಿದ್ದು ಆತನಿಗೆ ಇಷ್ಟವಾಗಿರಲಿಲ್ಲ.

ಇದೇ ಕಾರಣಕ್ಕೆ ಮನಬಂದಂತೆ ಥಳಿಸಿದ್ದಾನೆ. ಪರಿಣಾಮ, ಯುವತಿಯ ತಲೆಗೆ ತೀವ್ರ ಪೆಟ್ಟಾಗಿದೆ. ಇದೀಗ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೀಕೆಂಡ್ ನಲ್ಲಿ ಆಭರಣ ಖರೀದಿಸುವ ಪ್ಲಾನ್‌ ಇದ್ಯಾ.? ಚಿನ್ನದ ದರ ಹೇಗಿದೆ ನೋಡಿ