Publish Date: Sat, 25 Dec 2021 (05:21 IST)
Updated Date: Sat, 25 Dec 2021 (05:23 IST)
ಚೆನ್ನೈ: ಕೌಟುಂಬಿಕ ವೈಮನಸ್ಯದಿಂದ ಬೇಸತ್ತು ತಾಯಿಯೇ ಮಗುವನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಮೂರು ವರ್ಷಗಳ ಹಿಂದೆ ದಂಪತಿಗೆ ಮದುವೆಯಾಗಿತ್ತು. ಆದರೆ ಇಬ್ಬರ ನಡುವೆ ಸದಾ ಜಗಳವಾಗುತ್ತಿತ್ತು. ಕೌಟುಂಬಿಕ ಕಲಹದಿಂದ ಬೇಸತ್ತ ಪತ್ನಿ ಗಂಡ ಕೆಲಸಕ್ಕೆ ಹೋಗಿದ್ದಾಗ ಬಾಗಿಲು ಹಾಕಿಕೊಂಡು ಮಗುವನ್ನು ಜೊತೆಗೆ ಇಟ್ಟುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನೆರೆಹೊರೆಯವರು ಸ್ಥಳಕ್ಕೆ ಆಗಮಿಸಿ ತಾಯಿ ಮಗುವನ್ನು ರಕ್ಷಿಸಲು ಯತ್ನಿಸಿದರೂ ಸಾಧ‍್ಯವಾಗಲಿಲ್ಲ. ಘಟನಾ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು, ಅದನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.