Publish Date: Fri, 24 Dec 2021 (09:30 IST)
Updated Date: Fri, 24 Dec 2021 (09:34 IST)
ಮುಂಬೈ: ಅತ್ಯಾಚಾರ ಆರೋಪದಲ್ಲಿ ಬಂಧಿತನಾಗಿದ್ದ ಮಗನನ್ನು ಬಿಡಿಸಲು ಖತರ್ನಾಕ್ ಐಡಿಯಾ ಮಾಡಿದ್ದ ತಂದೆಯೂ ಅರೆಸ್ಟ್ ಆದ ಘಟನೆ ನಡೆದಿದೆ.
ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ್ದ ಮಗನನ್ನು ರಕ್ಷಿಸಲು ಆತ ಅಪ್ರಾಪ್ತ ಎಂದು ಅಧಿಕಾರಿಗಳಿಗೆ ಸುಳ್ಳು ದಾಖಲೆ ನೀಡಿ ವಂಚಿಸಲು ತಂದೆ ಯತ್ನಿಸಿದ್ದ. ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ನೀಡಿದ್ದ.
ಆತನ ಜನನ ಪ್ರಮಾಣ ಪತ್ರ ಅಸಲಿಯೇ ಎಂದು ವಿಚಾರಿಸಲು ಪೊಲೀಸರು ಹೋದಾಗ ನಿಜ ವಿಚಾರ ಬಯಲಾಗಿತ್ತು. ಆರೋಪ ಸಾಬೀತಾಗಿದ್ದರಿಂದ ತಂದೆಗೂ ನ್ಯಾಯಾಲಯ ಶಿಕ್ಷೆ ವಿಧಿಸಿದೆ.