ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ವಂಚನೆ ಜಾಲ ಸಕ್ರಿಯವಾಗಿದೆ. ಅಮೆರಿಕನ್ ಡಾಲರ್ ಎಂದು ನ್ಯೂಸ್ ಪೇಪರ್ ಕೊಟ್ಟು ಲಕ್ಷ-ಲಕ್ಷ ವಂಚಿರುವ ಘಟನೆ ನಡೆದಿದೆ. ಆರ್.ಟಿ.ನಗರದ ಕಾಂಡಿಮೆಂಟ್ಸ್ಗೆ ಟೀ ಕುಡಿಯಲು ಬಂದ ಆರೋಪಿಗಳು, ಮಾಲೀಕನಿಗೆ ಒಂದೆರೆಡು ಅಮೆರಿಕನ್ ಡಾಲರ್ ತೋರಿಸಿ ಇದ್ಯಾವುದೋ ಬೇರೆ ದೇಶದ ಕರೆನ್ಸಿ ಇರಬೇಕು.
ಅದನ್ನು ನೋಡಿದ ಕಾಂಡಿಮೆಂಟ್ಸ್ ಮಾಲೀಕ, ಇದು ಅಮೆರಿಕನ್ ಡಾಲರ್. ನಿಮಗೆ ಹೇಗೆ ಸಿಕ್ತು ಎಂದು ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಆರೋಪಿಗಳು, ಯಾವುದೋ ಕಸದ ಬುಟ್ಟಿಯಲ್ಲಿ ಸಿಕ್ಕಿದವು ಎಂದು ನಾಲ್ಕೈದು ಡಾಲರ್ಗಳನ್ನು ಕೊಟ್ಟಿದ್ದಾರೆ. ನಂತರ ಅಂಗಡಿ ಮಾಲೀಕ ನಾಳೆ ಬನ್ನಿ. ಇದು ಒರಿಜಿನಲ್ ಅಥವಾ ನಕಲಿಯೋ ಅಂತ ತಿಳಿಸುತ್ತೇನೆ ಎಂದಿದ್ದರು.ಬಳಿಕ ಅಂಗಡಿ ಮಾಲೀಕ ಮನಿ ಎಕ್ಸ್ಚೇಂಜ್ಗೆ ಹೋಗಿ ಡಾಲರ್ ಕೊಟ್ಟು ಒಂದು ನೋಟಿಗೆ ಮುನ್ನೂರು ರೂ. ಪಡೆದುಕೊಂಡು ಬಂದಿದ್ದರು. ಮೂರು ದಿನದ ಬಳಿಕ ಆರೋಪಿಗಳು ಮತ್ತೆ ಅಂಗಡಿಗೆ ಬಂದಾಗ, ಡಾಲರ್ಗಳು ಒರಿಜಿನಲ್ ಎಂದು ತಿಳಿಸಿದ್ದರು.
ನಂತರ ಆರೋಪಿಗಳು ಈ ರೀತಿಯ ಡಾಲರ್ಗಳು ಒಂದು ಬ್ಯಾಗ್ ತುಂಬಾ ಇವೆ. ಬನ್ನಿ ನಿಮಗೆ ಕಡುತ್ತೇವೆ ಎಂದು ಯಶವಂತಪುರಕ್ಕೆ ಕರೆಸಿಕೊಂಡಿದ್ದರು. ಬಳಿಕ ಮಾಲೀಕನಿಗೆ ಅಮೆರಿಕನ್ ಡಾಲರ್ ಎಂದು ನ್ಯೂಸ್ ಪೇಪರ್ ಕೊಟ್ಟು, ಅವರಿಂದ 2 ಲಕ್ಷ ರೂ. ಪಡೆದು ಪರಾರಿಯಾಗಿದ್ದಾರೆ. ಮಾಲೀಕ ಮನೆಗೆ ಹೋಗಿ ಬ್ಯಾಗ್ ತೆಗೆದು ನೋಡಿದಾಗ ಬರೀ ನ್ಯೂಸ್ ಪೇಪರ್ಗಳಿದ್ದವು. ಈ ಸಂಬಂಧ ಕಾಂಡಿಮೆಂಟ್ಸ್ ಮಾಲೀಕ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.