Publish Date: Thu, 23 Dec 2021 (09:36 IST)
Updated Date: Thu, 23 Dec 2021 (09:38 IST)
ಲಕ್ನೋ: ನೃತ್ಯ ಕಲಿಸುವ ನೆಪದಲ್ಲಿ ಶಿಕ್ಷಕ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಬಾಲಕಿಯ ಅಶ್ಲೀಲ ಫೋಟೋಗಳನ್ನು ಮೊಬೈಲ್ ನಲ್ಲಿ ಇಟ್ಟುಕೊಂಡಿದ್ದ ನೃತ್ಯ ಶಿಕ್ಷಕ ಆಕೆಗೆ ಕಿರುಕುಳ ನೀಡುತ್ತಿದ್ದ. ಈ ನಡುವೆ ಬಾಲಕಿ ತಂದೆಯ ಮೊಬೈಲ್ ನಿಂದ 20 ಸಾವಿರ ರೂ. ವರ್ಗಾಯಿಸಿದ್ದಳು.
ತನ್ನ ಖಾತೆಯಿಂದ ಹಣ ವರ್ಗಾವಣೆಯಾದ ಬಗ್ಗೆ ತಂದೆ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದಾಗ ನೃತ್ಯ ಶಿಕ್ಷಕನ ಕರ್ಮಕಾಂಡ ಬಯಲಾಗಿತ್ತು. ಇದೀಗ ಬಾಲಕಿಯ ತಾಯಿ ನೃತ್ಯ ಶಿಕ್ಷಕನ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ.