Select Your Language

Notifications

webdunia
webdunia
webdunia
webdunia

ಅಪ್ರಾಪ್ತೆಯನ್ನು ಮದುವೆಯಾಗಿ ಅತ್ಯಾಚಾರ ಮಾಡಿದ ಆರೋಪಿ ಅರೆಸ್ಟ್

ಅಪ್ರಾಪ್ತೆಯನ್ನು ಮದುವೆಯಾಗಿ ಅತ್ಯಾಚಾರ ಮಾಡಿದ ಆರೋಪಿ ಅರೆಸ್ಟ್
ಮುಂಬೈ , ಶುಕ್ರವಾರ, 24 ಡಿಸೆಂಬರ್ 2021 (11:11 IST)
ಮುಂಬೈ: ಅಪ್ರಾಪ್ತೆಯನ್ನು ಮದುವೆಯಾಗಿ ಅತ್ಯಾಚಾರ ಮಾಡಿದ 27 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

15 ವರ್ಷದ ಬಾಲಕಿಯನ್ನು ಮದುವೆಯಾದ ಮೇಲೆ ಆರೋಪಿ ಹಲವು ಬಾರಿ ಅತ್ಯಾಚಾರ ನಡೆಸಿದ್ದ. ಇದರಿಂದಾಗಿ ಆಕೆ ಗರ್ಭಿಣಿಯಾಗಿದ್ದಳು. ಹೆರಿಗೆಗೆ ಆಸ್ಪತ್ರೆಗೆ ದಾಖಲಾದಾಗ ವೈದ್ಯರಿಗೆ ಗಂಡ, ಅತ್ತೆ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ದಾರೆ. ಅನುಮಾನಗೊಂಡು ಆಧಾರ್ ಕಾರ್ಡ್ ನೋಡಿದಾಗ ನಿಜಾಂಶ ಬಯಲಾಗಿದೆ.

ಇದರಿಂದಾಗಿ ವೈದ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬಡತನದ ಕಾರಣದಿಂದ ಬಾಲಕಿಯನ್ನು ಶಿಕ್ಷಣ ಮೊಟಕುಗೊಳಿಸಿ ಬಲವಂತವಾಗಿ ಮದುವೆ ಮಾಡಿಸಲಾಗಿದೆ ಎಂಬ  ವಿಚಾರ ಬೆಳಕಿಗೆ ಬಂದಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಬಾಲಕಿ ಮೇಲೆ 8 ಬಾರಿ ಇರಿದ ಪಾಪಿ