Publish Date: Sat, 25 Dec 2021 (07:22 IST)
Updated Date: Sat, 25 Dec 2021 (07:38 IST)
ಹೈದರಾಬಾದ್: ಯುವತಿಯರನ್ನು ಸೋಷಿಯಲ್ ಮೀಡಿಯಾದಲ್ಲಿ ಬಲೆಗೆ ಬೀಳಿಸಿ ನಗ್ನ ಫೋಟೋ ತೋರಿಸಿ ಬೆದರಿಕೆ ಹಾಕುತ್ತಿದ್ದ 19 ವರ್ಷದ ಯುವಕನನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ಬೇರೆ ಬೇರೆ ಹೆಸರಿನಲ್ಲಿ ಖಾತೆ ತೆರೆದು ಯುವತಿಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ ಆರೋಪಿ ಅವರ ನಗ್ನ, ಖಾಸಗಿ ಫೋಟೋಗಳನ್ನು ಕಳುಹಿಸುವಂತೆ ವಿನಂತಿಸುತ್ತಿದ್ದ.
ಬಳಿಕ ಆ ಫೋಟೋಗಳನ್ನು ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಒಂದು ವೇಳೆ ಹಣಕೊಡದೇ ಇದ್ದರೆ ಫೋಟೋ ಬಹಿರಂಗಗೊಳಿಸುವುದಾಗಿ ಬೆದರಿಸುತ್ತಿದ್ದ. ಈತನ ಕಾಟ ಸಹಿಸಲಾರದೇ ಬಾಲಕಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಳು. ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.