Publish Date: Sun, 26 Dec 2021 (09:15 IST)
Updated Date: Sun, 26 Dec 2021 (09:28 IST)
ಚೆನ್ನೈ: ಪತ್ನಿ ಮನೆಯಲ್ಲಿಲ್ಲದ ವೇಳೆ ಮದ್ಯಪಾನ ಮಾಡಿಕೊಂಡು ಬಂದಿದ್ದ ತಂದೆ 10 ವರ್ಷದ ಮಗಳ ಮೇಲೇ ಅತ್ಯಾಚಾರವೆಸಗಿದ ಹೀನ ಕೃತ್ಯ ತಮಿಳುನಾಡಿನಲ್ಲಿ ನಡೆದಿದೆ.
ಆರೋಪಿ ವಿರುದ್ಧ ಈಗ ಪೋಸ್ಕೋ ಖಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಮದ್ಯಪಾನ ಮಾಡಿ ಸ್ಥಿಮಿತ ಕಳೆದುಕೊಂಡಿದ್ದ ತಂದೆ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ.
ಪತ್ನಿ ಮನೆಗೆ ಮರಳಿದಾಗ ಮಗಳ ಸ್ಥಿತಿ ಕಂಡು ನಡೆದ ವಿಚಾರ ಬಯಲಾಗಿದೆ. ಇದೀಗ ಪತ್ನಿ ಆರೋಪಿ ಪತಿಯ ವಿರುದ್ಧ ದೂರು ನೀಡಿದ್ದು, ಆತನನ್ನು ಬಂಧಿಸಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.