Select Your Language

Notifications

webdunia
webdunia
webdunia
webdunia

ಧಾರವಾಹಿ ನೋಡುತ್ತಿರುವಾಗ ಚಿನ್ನಾಭರಣ ದೋಚಿದರು!

ಧಾರವಾಹಿ ನೋಡುತ್ತಿರುವಾಗ ಚಿನ್ನಾಭರಣ ದೋಚಿದರು!
ಚೆನ್ನೈ , ಮಂಗಳವಾರ, 28 ಡಿಸೆಂಬರ್ 2021 (08:40 IST)
ಚೆನ್ನೈ: ಮಹಿಳೆಯರು ಧಾರವಾಹಿ ನೋಡುತ್ತಿರುವಾಗ ಕಳ್ಳರು ಮನೆಯಿಂದ ಚಿನ್ನಾಭರಣ ದೋಚಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಅಡಿಟರ್ ಮೇಘನಾಥನ್ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ. ಮೇಘನಾಥನ್ ಮನೆಯಲ್ಲಿಲ್ಲದ ವೇಳೆ ಅವರ ಪತ್ನಿ ಸಂಬಂಧಿಕರೊಂದಿಗೆ ಟಿವಿ ನೋಡುತ್ತಿದ್ದರು. ಈ ವೇಳೆ ಮನೆಯ ಬಾಗಿಲು ಬಂದ್ ಮಾಡಲು ಮರೆತಿದ್ದರು. ಟಿವಿ ವಾಲ್ಯೂಂ ಜೋರಾಗಿ ಹಾಕಲಾಗಿತ್ತು.

ಇದರಿಂದಾಗಿ ಮನೆಯ ಹೊರಗೆ ಸದ್ದಾಗಿದ್ದು ಕೇಳಿಸುತ್ತಿರಲಿಲ್ಲ. ಇದನ್ನೇ ಬಂಡವಾಳವಾಗಿಸಿಕೊಂಡ ಕಳ್ಳರು ಮನೆಯೊಳಗೆ ನುಗ್ಗಿ ಸುಮಾರು 19 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಲ ಕೊಡಿಸೋದಾಗಿ ನಂಬಿಸಿ 5.85 ಕೋಟಿ ರೂ. ಮೋಸ!