Publish Date: Thu, 30 Dec 2021 (09:50 IST)
Updated Date: Thu, 30 Dec 2021 (09:59 IST)
ಲಕ್ನೋ: ಬಾಲಕಿ ಅಂಗಡಿಯಿಂದ ಮೊಬೈಲ್ ಕದ್ದಳೆಂದು ಮಾಲಿಕ ತನ್ನ ಸಹಚರರೊಂದಿಗೆ ಸೇರಿಕೊಂಡು ಆಕೆಯ ಮೇಲೆ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಅಮೇಥಿಯಲ್ಲಿ ನಡೆದಿದೆ.
ಅಪ್ರಾಪ್ತ ಬಾಲಕಿ ಮೊಬೈಲ್ ಕಳುವು ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆದರೆ ಮಾಲಿಕ ಇದನ್ನು ಪೊಲೀಸರ ಗಮನಕ್ಕೆ ತಾರದೇ ತಾನೇ ಕಳ್ಳತನ ಮಾಡಿದ ಬಾಲಕಿಗೆ ಶಿಕ್ಷೆ ಕೊಡಲು ಮುಂದಾಗಿದ್ದಾನೆ.
ಬಾಲಕಿಯನ್ನು ನೆಲದ ಮೇಲೆ ಮಲಗಿಸಿ ಕಾಲಿನ ಮೇಲೆ ಬಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ಪೊಲೀಸರ ಗಮನಕ್ಕೂ ಬಂದಿದ್ದು ಪ್ರಕರಣ ದಾಖಲಾಗಿದೆ.