Publish Date: Thu, 30 Dec 2021 (14:09 IST)
Updated Date: Thu, 30 Dec 2021 (16:54 IST)
ಬಿಜೆಪಿ ದುರಾಡಳಿತದಿಂದ ಜನ ಬೇಸತ್ತಿದ್ದಾರೆ ಎಂಬುದಕ್ಕೆ ಚುನಾವಣೆಯ ಫಲಿತಾಂಶವೇ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬರೀ ದುಡ್ಡು ಖರ್ಚು ಮಾಡಿದರೆ ಗೆಲ್ಲಲು ಆಗಲ್ಲ ಅನ್ನೋದಕ್ಕೆ ಈ ಫಲಿತಾಂಶ ಸಾಕ್ಷಿ, ಬಿಜೆಪಿಯವರು ಬರೀ ದುಡ್ಡಿದೆ, ಅಧಿಕಾರ ಇದೆ ಗೆದ್ದು ಬಿಡ್ತೀವಿ ಅಂತ ಹೋದರು, ಆದರೆ ಸೋತಿದ್ದಾರೆ, ರಾಜ್ಯದ ಜನರು ಕಾಂಗ್ರೆಸ್ ಪರವಾಗಿದ್ದಾರೆ ಎಂದು ತಿಳಿಸಿದರು.
ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 500ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಪಡೆದುಕೊಂಡು ಗೆಲುವನ್ನು ಸಾಧಿಸಿದೆ. ಬಿಜೆಪಿಯವರು 430 ಸ್ಥಾನಗಳನ್ನು ಪಡೆದು ಸೋತಿದ್ದಾರೆ. ಬಿಜೆಪಿ 434, ಜೆಡಿಎಸ್ 45 ಗೆದ್ದಿದೆ, ಸುಮಾರು ನೂರಕ್ಕೂ ಹೆಚ್ಚು ಸ್ಥಾನ ಅತಂತ್ರ ಆಗಿದೆ, ಬಿಜೆಪಿಯ ಭ್ರಷ್ಟಾಚಾರ, ಬೆಲೆ ಏರಿಕೆ, ದುರಾಡಳಿತ, ಅಭಿವೃದ್ಧಿ ಶೂನ್ಯ ಆಡಳಿತದಿಂದ ಜನರು ಕುಗ್ಗಿ ಹೋಗಿದ್ದಾರೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.