Select Your Language

Notifications

webdunia
webdunia
webdunia
webdunia

ಮಕ್ಕಳೂ ಕಾಣಿಸದೂ ಈ ಗ್ಯಾಂಗ್ ವಾರ್ ದ್ವೇಷಕ್ಕೆ! ಮುಂದೇನಾಯ್ತು?

ಮಕ್ಕಳೂ ಕಾಣಿಸದೂ ಈ ಗ್ಯಾಂಗ್ ವಾರ್ ದ್ವೇಷಕ್ಕೆ! ಮುಂದೇನಾಯ್ತು?
ಮೆಕ್ಸಿಕೊ , ಗುರುವಾರ, 30 ಡಿಸೆಂಬರ್ 2021 (09:39 IST)
ಮೆಕ್ಸಿಕೊ : ಗ್ಯಾಂಗ್ ವಾರ್ ದ್ವೇಷಕ್ಕೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಮೆಕ್ಸಿಕೊದಲ್ಲಿ ನಡೆದಿದೆ.
 
ಮಂಗಳವಾರ ತಡರಾತ್ರಿ ಬೈಕ್ನಲ್ಲಿ ಬಂದ ಇಬ್ಬರು ಬಂದೂಕುಧಾರಿಗಳು ಗ್ವಾನಾಜುವಾಟೊ ರಾಜ್ಯದ ಸಿಲಾವೊ ಪುರಸಭೆಯ ವ್ಯಾಪ್ತಿಯ ಮನೆಗಳ ಬಳಿ ಗುಂಡಿನ ದಾಳಿ ನಡೆಸಿದ್ದಾರೆ.

ಗುಂಡಿನ ದಾಳಿಗೆ ಜನರ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾರೆ. ಪರಿಣಾಮವಾಗಿ ಒಂದು ವರ್ಷದ ಮಗು ಮತ್ತು 16 ವರ್ಷದ ಬಾಲಕಿ ಸೇರಿದಂತೆ 8 ಜನರು ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಗ್ಯಾಂಗ್ಗಳು ಲಾಭದಾಯಕ ಮಾದಕವಸ್ತುಗಳ ಕಳ್ಳಸಾಗಣೆ ವಿಚಾರದಲ್ಲಿ ಪರಸ್ಪರ ಪೈಪೋಟಿ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಆಗಾಗ ಘರ್ಷಣೆಯಾಗುತ್ತಿದೆ. ಇದೇ ರೀತಿ ನವೆಂಬರ್ನಲ್ಲಿಯೂ ಎರಡು ದಾಳಿಗಳು ಸಿಲಾವೊದಲ್ಲಿ ನಡೆದಿದ್ದು, ಈ ವೇಳೆ 11 ಜನರು ಹತ್ಯೆಯಾಗಿದ್ದರು. 


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಮತ್ತಷ್ಟು ಏರಿಕೆಯತ್ತ ಓಮಿಕ್ರಾನ್!