Select Your Language

Notifications

webdunia
webdunia
webdunia
webdunia

ನಾಗಲ್ಯಾಂಡ್‌ನಲ್ಲಿ ಭೀಕರ ಗುಂಡಿನ ದಾಳಿ ನಡೆದಿದ್ದು ಯೋಧ ಸೇರಿ 13 ನಾಗರಿಕರು ಸಾವು

Thousands
bangalore , ಭಾನುವಾರ, 5 ಡಿಸೆಂಬರ್ 2021 (19:46 IST)
ನಾಗಲ್ಯಾಂಡ್‌ನಲ್ಲಿ ಭೀಕರ ಗುಂಡಿನ ದಾಳಿ ನಡೆದಿದ್ದು ಯೋಧ ಸೇರಿ 13 ನಾಗರಿಕರು ಸಾವನ್ನಪ್ಪಿದ್ದಾರೆ. ಮೋನ್ ಜಿಲ್ಲೆಯ ತಿರು ಗ್ರಾಮದಲ್ಲಿ ನಿನ್ನೆ ಸಂಜೆ ನಡೆದ ಗುಂಡಿನ ದಾಳಿಯಲ್ಲಿ 13 ಮಂದಿ ದುರ್ಮರಣ ಹೊಂದಿದ್ದಾರೆ. ಓಟಿಂಗ್ ಎಂಬ ಗ್ರಾಮದ ಜನರು ಪಿಕ್ ಅಪ್ ಮಿನಿ ಟ್ರಕ್‌ನಿಂದ ಮನೆಕಡೆ ಬರುತ್ತಿದ್ದರು. ಈ ವೇಳೆ ತಿರು ಗ್ರಾಮದ ಬಳಿ ಅವರ ಮೇಲೆ ಗುಂಡಿನ ದಾಳಿಯಾಗಿದೆ.. ತುಂಬ ಸಮಯವಾದರೂ ಬಾರದನ್ನು ನೋಡಿ ಸ್ಥಳೀಯರು  ಹುಡುಕುತ್ತಾ ಹೋಗಿದ್ರು. ಈ ವೇಳೆ 13 ಮೃತ ದೇಹಗಳನ್ನು ನೋಡಿ ರೋಷಗೊಂಡಿದ್ದಾರೆ. ಅಲ್ಲೇ ಇದ್ದ ಭದ್ರತಾ ಪಡೆಗಳ ಎರಡು ವಾಹನಗಳ ಮೇಲೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಘಟನೆಗೆ ನಿಖರ ಕಾರಣ ತಿಳಿದಿಲ್ಲ. 13 ನಾಗರಿಕರನ್ನು ಯಾರು, ಯಾಕೆ ಹತ್ಯೆ ಮಾಡಿದ್ದಾರೆ ಎನ್ನುವ ಬಗ್ಗೆಯೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ಪ್ರತಿಕ್ರಿಯೆ ನೀಡಿದ್ದು, ಪ್ರಕರಣದ ಬಗ್ಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಸೂಚಿಸಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಈ ಯೋಜನೆಯಡಿ 3 ಲಕ್ಷ ರೂ. ಸಾಲ ಸೌಲಭ್ಯ