Publish Date: Sun, 25 Jan 2026 (17:31 IST)
Updated Date: Sun, 25 Jan 2026 (17:34 IST)
ಕಲಬುರಗಿ: ಬಿಜೆಪಿಯವರಿಗೆ ಕಾಂಗ್ರೆಸ್, ಮುಸ್ಲಿಂ ಸೇರಿದಂತೆ ನಾಲ್ಕು ಪದಗಳನ್ನು ಬಿಟ್ಟರೆ ಬೇರೆ ಮಾತನಾಡಲು ಬರಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ದ್ವೇಷ ಭಾಷಣ ಕಾಯ್ದೆಯಡಿ ವಿಕಾಸ್ ಪುತ್ತೂರು ನೋಟಿಸ್ ನೀಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದ ಬಗ್ಗೆ ನನಗೆ ಹೆಚ್ಚೇನು ಮಾಹಿತಿಯಿಲ್ಲ. ಆದರೆ ಬಿಜೆಪಿಯವರು ದ್ವೇಷ ಭಾಷಣ ಮಾಡುತ್ತಾರೆ. ಅವರಿಗೆ ಕಾಂಗ್ರೆಸ್,ಮುಸ್ಲಿಂ ಸೇರಿದಂತೆ ನಾಲ್ಕು ಪದಗಳು ಬಿಟ್ಟು ಬೇರೆ ಮಾತನಾಡೋಕೆ ಬರೋಲ್ಲ ಎಂದರು.
ಬಿಎನ್ ಎಸ್ ಕಾಯ್ದೆಯಲ್ಲೂ ದ್ವೇಷ ಭಾಷಣ ಇದೆ. ಅದರಡಿ ಪೊಲೀಸರು ನೋಟಿಸ್ ನೀಡಿರಬೇಕು. ಇನ್ನೂ ರಾಜೀವ್ ಗೌಡ ಅವರನ್ನು ಈಗಾಗಲೇ ಪಕ್ಷದಿಂದ ಉಚ್ಛಾಟಿಸಲಾಗಿದೆ. ನಾವು ಸಿಟಿ ರವಿ ಅವರಿಂದ ನಾವು ಕಲಿಯಬೇಕಿಲ್ಲ ಎಂದರು.
ಆದರೆ ಪೋಕ್ಸೋ ಕೇಸ್ ಇರೋ ವ್ಯಕ್ತಿಯನ್ನ ವೇದಿಕೆಯಲ್ಲಿ ಕುರಿಸಿಕೊಳ್ಳುತ್ತಿದ್ದಾರೆ. ಸಿ.ಟಿ ರವಿಯವರು ಯಾಕೆ ಸದನದಲ್ಲಿ ಅವಾಚ್ಚ್ಯವಾಗಿ ಮಾತನಾಡಿದ ಬಗ್ಗೆ ಯಾಕೆ ವಾಯ್ಸ್ ಸ್ಯಾಂಪಲ್ ಕೊಟ್ಟಿಲ್ಲ ಎಂದರು.
ಜಂಟಿ ಅದೀವೇಶನದಲ್ಲಿ ರಾಜ್ಯಪಾಲರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ. ನಾವು ರಾಜ್ಯ ನೀತಿಗಳನ್ನ ಭಾಷಣದಲ್ಲಿ ಹೇಳಿದ್ದೆವು. ಅದನ್ನೆ ರಾಜ್ಯಪಾಲರು ಓದಿಲ್ಲ. ಅದರಲ್ಲಿ ಕೇಂದ್ರದ ವಿರುದ್ದ ನಾವು ಯಾವುದೇ ಕೆಟ್ಟ ಶಬ್ದ ಬಳಸಿಲ್ಲ. ಆದ್ರೂ ರಾಜ್ಯಪಾಲರು ನೀತಿ ನಿಯಮಗಳಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದರು.