ಬೆಂಗಳೂರು: ತನ್ನ ಹೆಸರಿನಲ್ಲಿ ನಕಲಿ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವವರ ವಿರುದ್ಧ ಕಾನೂನು ರೀತ್ಯಾ ಕ್ರಮವನ್ನು ಕೈಗೊಳ್ಳುವುದಾಗಿ ಬಿಜೆಪಿ ನಾಯಕ ಸಿಟಿ ರವಿ ಹೇಳಿದರು.
ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಿಟಿ ರವಿ ಅವರು ಬರೆದುಕೊಂಡಿದ್ದಾರೆ.
ಬೆಂಗಳೂರಿನ ಅಭಿವೃದ್ಧಿಗೆ ಅದು ಕೇಂದ್ರಾಡಳಿತ ಪ್ರದೇಶವಾಗಬೇಕೆಂದು ನಾನು ಹೇಳಿದ್ದೇನೆ ಎಂಬಂತೆ ಯಾರೋ ಕಿಡಿಗೇಡಿಗಳು ನಕಲಿ ಸುದ್ದಿಯನ್ನು ಮಾಧ್ಯಮವೊಂದರಲ್ಲಿ ವರದಿ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಇಂತಹ ಹೇಳಿಕೆಯನ್ನು ನಾನು ಎಂದಿಗೂ ನೀಡಿಲ್ಲ. ಇದು ಫೇಕ್ ಚಿತ್ರ ಎಂದು ಪ್ರಜಾವಾಣಿಯೂ ಸ್ಪಷ್ಟಪಡಿಸಿದೆ. ಇದಕ್ಕಾಗಿ ಪತ್ರಿಕೆಗೆ ಧನ್ಯವಾದಗಳು. ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ, ಅವುಗಳನ್ನು ಹಂಚಿಕೊಳ್ಳಬೇಡಿ ಎಂದು ಮನವಿ ಮಾಡುತ್ತೇನೆ.
ಇಂತಹ ಎಡಿಟ್ ಮಾಡಿದ ಕಿಡಿಗೇಡಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಿದ್ದೇನೆ.