Publish Date: Sun, 25 Jan 2026 (17:13 IST)
Updated Date: Sun, 25 Jan 2026 (17:16 IST)
ಬೆಂಗಳೂರು: ಬೇರೆ ದೇಶಕ್ಕೆ ಹೋಗಿ ನಮ್ಮ ದೇಶದ ವಿರುದ್ಧ ಮಾತನಾಡೋಕೆ ಆಗುತ್ತಾ. ವಿದೇಶದಲ್ಲಿ ನಮ್ಮ ದೇಶದ ವಿರುದ್ದ ನಾನು ಮಾತನಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ದಾವೋಸ್ ಪ್ರವಾಸದ ವೇಳೆ ನಮ್ಮ ದೇಶದ ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡುವಾಗ, ಚೆನ್ನಾಗಿದೆ ಎಂದು ಹೇಳಿದ್ದೇನೆ. ಬೇರೆ ದೇಶಕ್ಕೆ ಹೋದಾಗ ನಮ್ಮ ದೇಶದ ವಿರುದ್ಧ ಮಾತನಾಡಲು ಆಗುವುದಿಲ್ಲ ಎಂದು ಹೇಳಿದರು.
ರಾಹುಲ್ ಗಾಂಧಿ ಭಾರತದ ಆರ್ಥಿಕತೆ ಸರಿ ಇಲ್ಲ ಎಂದು ಹೇಳುವಾಗ ನೀವು ಭಾರತವನ್ನು ಹೊಗಳಿದ್ದೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಯಾವ ಸನ್ನಿವೇಶದಲ್ಲಿ, ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ.
ಇನ್ನೂ ರಾಹುಲ್ ಗಾಂಧಿ ಅವರು ದೇಶದ ವಿರುದ್ಧ ಹೇಳಿಕೆಯನ್ನು ನೀಡಿಲ್ಲ. ಆಂತರಿಕ ವ್ಯವಸ್ಥೆಯ ಬಗ್ಗೆ ಹೇಳಿದ್ದಾರೆ. ರಾಜಕೀಯಕ್ಕೆ ನಾನು ಭಾರತವನ್ನು ಬೈಯಲು ಸಾಧ್ಯವಿಲ್ಲ ಎಂದರು.