Publish Date: Tue, 31 Jul 2018 (15:37 IST)
Updated Date: Tue, 31 Jul 2018 (18:20 IST)
ಈಗಾಗಲೇ ಹಲವು ರಾಜ್ಯಗಳಲ್ಲಿ ನಿಷೇಧಿಸಿರುವ ಕೀಕಿ ಚಾಲೆಂಜ್ ನ್ನ ಸ್ವೀಕರಿಸಿರುವ ಬಿಗ್ ಬಾಸ್ ಸ್ಪರ್ಧಿ ನಿವೇದಿತಗೌಡ ಚಲಿಸುವ ಕಾರಿನಿಂದ ಇಳಿದು ಡ್ಯಾನ್ಸ್ ಮಾಡಿ ವಿಡಿಯೋವನ್ನ ಇನ್ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದು, ಈ ವಿಡಿಯೋ ಈಗ ಹಲವು ಟೀಕೆಗಳನ್ನ ಹುಟ್ಟಿ ಹಾಕಿದೆ.
ಏನಿದು ಕೀಕಿ ಚಾಲೆಂಜ್:
ದೇಶದ ಪ್ರಮುಖ ನಗರಗಳಾದ ಮುಂಬೈ, ದೆಹಲಿ ಮತ್ತು ಮಹರಾಷ್ಟ್ರ ರಾಜ್ಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಕೀಕಿ ಚಾಲೆಂಜ್ (ಚಲಿಸುತ್ತಿರುವ ಕಾರಿನಿಂದ ಇಳಿದು ಡ್ಯಾನ್ಸ್ ಮಾಡುತ್ತಾ ಮತ್ತೇ ಕಾರಿಗೆ ಹತ್ತುವುದು) ನಿಂದ ಸರಣಿ ಅಫಘಾತಗಳು ಸಂಭವಿಸಿದ್ದರಿಂದ ಈ ಮೇಲಿನ ಪೊಲೀಸರು ಲಾಠಿ ಹಿಡಿದು ಈ ಚಾಲೆಂಜ್ ಮಾಡುವವರಿಗೆ ಸರಿಯಾದ ಪಾಠ ಕಲಿಸುತ್ತಿದ್ದಾರೆ.
ಕೀಕಿ ಚಾಲೆಂಜ್ ಸ್ವೀಕರಿಸಿರುವ ನಿವೇದಿತಾಗೌಡ:
ಕೀಕಿ ಚಾಲೆಂಜ್ ಸ್ವೀಕರಿಸಿರುವ ಬಿಗ್ ಬಾಸ್ ಸ್ಪರ್ಧಿ ಗೊಂಬೆ ಎಂದು ಪ್ರಸಿದ್ದಿ ಪಡೆದುಕೊಂಡಿರುವ ನಿವೇದಿತ ಗೌಡ ನಗರದ ರಸ್ತೆಯಲ್ಲಿ ಚಲಿಸುತ್ತಿರುವ ಕಾರಿನಿಂದ ಇಳಿದು ಸುಮಾರು 15 ಸೆಕೆಂಡ್ ಗಳ ಕಾಲ ಡ್ಯಾನ್ಸ್ ಮಾಡಿ ಮತ್ತೆ ಕಾರು ಹತ್ತುವ ಮೂಲಕ ಯಶಸ್ವಿಯಾಗಿ ಕೀಕಿ ಚಾಲೆಂಜ್ ಮುಗಿಸಿದ್ದಾಳೆ. ಈ ವಿಡಿಯೋವನ್ನ ನಿವೇದಿತಾ ಗೌಡ ಇನ್ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದು , ಈ ವಿಡಿಯೋ ವಿರುದ್ಧ ಹಲವು ಟೀಕೆಗಳು ಕೇಳಿ ಬಂದಿವೆ.
ಈ ವಿಡಿಯೋ ನೋಡಿದ ಹಲವು ಜನರು ನಿವೇದಿತಾ ಈ ತರಹ ಮಾಡೊಕೆ ಹೋಗಿ ತುಂಬ ಜನರಿಗೆ ಅಫಘಾತಗಳು ಸಂಭವಿಸಿದೆ. ಇದು ಕರ್ನಾಟಕದಲ್ಲಿ ಬ್ಯಾನ್ ಮಾಡಿದ್ದಾರೆ. ನೀವೆಲ್ಲಾ ಸೆಲೆಬ್ರಿಟಿಗಳು. ನೀವು ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ನೀವೆ ಈತರಹ ಮಾಡಿದರೆ ಹೇಗೆ? ಎಂದು ಹಲವರು ಟೀಕೆ ಮಾಡಿದ್ದಾರೆ.