Publish Date: Fri, 12 Jan 2018 (09:21 IST)
Updated Date: Fri, 12 Jan 2018 (09:24 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಿನ್ನೆ ನಿವೇದಿತಾ ಮಾಡಿದ ಟಾಸ್ಕ್ ಗೆ ವೀಕ್ಷಕರು ಫಿದಾ ಆಗಿದ್ದಾರೆ. ದುರ್ಬಲ ಹುಡುಗಿ ಎಂದೇ ಬಿಂಬಿತವಾಗಿರುವ ನಿವೇದಿತಾ ಪದೇ ಪದೇ ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಿದ್ದಾರೆ.
ನಿನ್ನೆ ದಿವಾಕರ್ ಪತ್ನಿ ಮನೆಯೊಳಗೆ ಬಂದಾಗ ನಿವೇದಿತಾ ಮಡಕೆ ಬ್ಯಾಲೆನ್ಸ್ ಟಾಸ್ಕ್ ಮಾಡಬೇಕಿತ್ತು. ಅದರಂತೆ ನಿವೇದಿತಾ ಬರೋಬ್ಬರಿ 30 ನಿಮಿಷ ಬ್ಯಾಲೆನ್ಸ್ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಂತರವೂ ನಿವೇದಿತಾ ಮಡಕೆ ಬೀಳಿಸಿರಲಿಲ್ಲ. ಆದರೆ ಕೊನೆಗೆ ಸ್ವತಃ ಬಿಗ್ ಬಾಸ್ ಸ್ಟಾಪ್ ಮಾಡಲು ಹೇಳಿದ್ದಕ್ಕೆ ನಿವೇದಿತಾ ಬಿಟ್ಟುಕೊಟ್ಟರು.
ಇದರಿಂದಾಗಿ ದಿವಾಕರ್ ಗೆ ತುಂಬಾ ಹೊತ್ತು ತಮ್ಮ ಪತ್ನಿ ಜತೆ ಕಳೆಯಲು ಸಾಧ್ಯವಾಯಿತು. ಮನೆಯವರೂ ನಿವೇದಿತಾ ಸಾಹಸಕ್ಕೆ ಬೆನ್ನು ತಟ್ಟಿದರು. ಅದಕ್ಕಿಂತ ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ನಿವೇದಿತಾ ಸಾಹಸವನ್ನು ಕೊಂಡಾಡಿದ್ದಾರೆ. ಇಷ್ಟು ಸಾಕಲ್ಲವೇ? ನಿರ್ಣಾಯಕ ಘಟ್ಟದಲ್ಲಿ ಚಮಕ್ ಸೃಷ್ಟಿಸಲು?!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ