ಭಾರೀ ಅವಘಡ: ನೆಲಕ್ಕೆ ಬಿದ್ದ ಹಿಂದೂ ಏಕತಾ ಗಣಪತಿ ಮೂರ್ತಿ

ಗುರುವಾರ, 12 ಸೆಪ್ಟಂಬರ್ 2019 (19:21 IST)
ವಿಸರ್ಜನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹಿಂದೂ ಏಕತಾ ಗಣಪತಿ ನೆಲಕ್ಕೆ ಬಿದ್ದು ಭಗ್ನಗೊಂಡಿರೋ ಘಟನೆ ನಡೆದಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಗಣೇಶ ಮೂರ್ತಿ ಪಲ್ಟಿಯಾಗಿದೆ. ಮೆರವಣಿಗೆಯಲ್ಲಿ ವಿಸರ್ಜನೆಗೆ ತೆಗೆದುಕೊಂಡು ಹೋಗುವಾಗ ಘಟನೆ ನಡೆದಿದೆ.

ಪೊಲೀಸ್ ಮತ್ತು ಮೆರವಣಿಗೆ ಮಾಡುತ್ತಿದ್ದವರ ನಡುವೆ ಗಲಾಟೆ ನಡೆಯಿತು. ಡಿಜೆ ವಿಚಾರವಾಗಿ ಬೆಳಗಿನಿಂದ ವಾದ ಪ್ರತಿವಾದ ನಡೆಯುತ್ತಿತ್ತು.

ಪೊಲೀಸ್ ವರಿಷ್ಠಾದಿಕಾರಿಗಳು ಚನ್ನಗಿರಿಗೆ ಭೇಟಿ ನೀಡಿ ಡಿಜೆಗೆ ಅವಕಾಶ ನೀಡದೋನ್ನ ತಡೆದಿದ್ರು.
ಇದರಿಂದ ಆಕ್ರೋಶಗೊಂಡ ಸಮಿತಿಯವರು ಪ್ರತಿಭಟನೆ ನಡೆಸಿದ್ರು. ಇದೀಗ ಟ್ರ್ಯಾಕ್ಟರ್ ಪಲ್ಟಿಯಾಗಿ ಗಣೇಶ ಮೂರ್ತಿ ಭಗ್ನಗೊಂಡಿದೆ.

ಪೊಲೀಸರಿಂದಲೇ ದುರ್ಘಟನೆ ನಡೆದಿದೆ ಎಂದು ಗಣೇಶನ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲೇ ಪೊಲೀಸ್ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಂಠ ಪೂರ್ತಿ ಕುಡಿದು ಕಾರು ಓಡಿಸಿದ RTO ಇನ್ಸಪೆಕ್ಟರ್ : ಹಿಗ್ಗಾ ಮುಗ್ಗಾ ಉಗಿದ ಜನರು