ಹೆತ್ತ ತಾಯಿಯ ನಿಧನರಾದ ಬಳಿಕ ಅವರ ಅಸ್ಥಿಯನ್ನು ಬಿಡೋಕೆ ಅಂತ ನದಿಗೆ ಹೋಗಿದ್ದ ಮಗ ನದಿ ನೀರು ಪಾಲಾಗಿರೋ ಹೃದಯ ವಿದ್ರಾವಕ ಘಟನೆ ನಡೆದಿದೆ.
ಬೆಂಗಳೂರಿನ ನಿವಾಸಿ ಶ್ರೀಕಾಂತ್, ಕಾವೇರಿ ನದಿ ಸಂಗಮದಲ್ಲಿ ನೀರು ಪಾಲಾಗಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂ ಪ್ರದೇಶದ ಕಾವೇರಿ ನದಿ ಸಂಗಮದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಸಂಗಮಕ್ಕೆ ತಾಯಿ ಅಸ್ಥಿ ವಿಸರ್ಜನೆಗೆ ಆಗಮಿಸಿದ್ದ ಶ್ರೀಕಾಂತ್, ನದಿ ನೀರಿನ ರಭಸಕ್ಕೆ ನೀರುಪಾಲಾಗಿದ್ದಾರೆ. ಮೃತ ದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ.