Select Your Language

Notifications

webdunia
webdunia
webdunia
webdunia

ಗಂಡಸ್ತನ ಪರೀಕ್ಷೆ ಮಾಡಿಕೊಳ್ಳೋದು ಹೇಗೆ?

ಗಂಡಸ್ತನ ಪರೀಕ್ಷೆ ಮಾಡಿಕೊಳ್ಳೋದು ಹೇಗೆ?
ಬೆಂಗಳೂರು , ಸೋಮವಾರ, 29 ಜುಲೈ 2019 (14:01 IST)
ಗಂಡು ಹಾಗೂ ಹೆಣ್ಣಿನ ಸಮಾಗಮದಲ್ಲಿ ಪ್ರಧಾನ ಪಾತ್ರವನ್ನು ಪುರುಷರ ಗಂಡಸ್ತನ ವಹಿಸುತ್ತದೆ ಎನ್ನಲಾಗಿದೆ. ಹಾಗಾದರೆ ಗಂಡಸ್ತನ ಅಥವಾ ಪುರುಷತ್ವವು ಜೀವ ಉತ್ಪತ್ತಿಯಲ್ಲಿ ಪ್ರಧಾನ ಪಾತ್ರ ವಹಿಸುವ ವೀರ್ಯವನ್ನು ಅವಲಂಬಿಸಿದೆ. ಅಂದರೆ ವೀರ್ಯ ಪರೀಕ್ಷೆಯಿಂದ ಪುರುಷತ್ವದ ಬಗ್ಗೆ ಸ್ಪಷ್ಟ ಕಲ್ಪನೆ ಬರಬಹುದು.

ವೀರ್ಯ ಪರೀಕ್ಷಿಸಲು ಈಗ ಹಲವಾರು ವಿಧಾನಗಳು ಜಾರಿಯಲ್ಲಿವೆ. ಆದರೂ ಜನಪದರು ಹಾಗೂ ನಮ್ಮ ಈ ಹಿಂದಿನ ತಲೆಮಾರುಗಳು ಜನರು ತಮ್ಮದೇ ಆದ ಪದ್ಧತಿಗಳ ಮೂಲಕ ಶುದ್ಧ ಹಾಗೂ ವೀರ್ಯದ ಪವಿತ್ರ್ಯತೆಯ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಈ ಕ್ರಮ ಈಗ ಚಾಲ್ತಿಯಲ್ಲಿ ಇಲ್ಲವಾದರೂ ಆ ಕ್ರಮ ಏನೆಂಬುದನ್ನು ನೋಡೋಣ.

ನೀರಿನಲ್ಲಿ ವೀರ್ಯವು ಸಂಪೂರ್ಣವಾಗಿ ಮುಳುಗಿದ್ರೆ ಅದು ಶುದ್ಧ ವೀರ್ಯ ಹಾಗೂ ಅದರಲ್ಲಿ ಯಾವ ದೋಷ ಇಲ್ಲ ಅಂತ ಹಿರಿಯರು ತಿಳಿದುಕೊಳ್ಳುತ್ತಿದ್ರು. ವೀರ್ಯವನ್ನು ನೀರಿನಲ್ಲಿ ಹಾಕಬೇಕು. ನೀರ ಮೇಲೆ ತೇಲಿದ ಅಥವಾ ಅರ್ಧ ಮುಳುಗಿದ ವೀರ್ಯದಲ್ಲಿ ದೋಷವಿದೆ ಎನ್ನಲಾಗುತ್ತಿತ್ತು.

ಕುಂಬಳಕಾಯಿ ಇಲ್ಲವೇ ಎಳೆಯ ಸಸಿ ಮೇಲೆ ಸ್ತ್ರೀ, ಪುರುಷನು ಪ್ರತ್ಯೇಕವಾಗಿ ಮೂತ್ರ ವಿಸರ್ಜನೆ ಮಾಡಬೇಕು. ಇಲ್ಲಿ ಯಾರ ಮೂತ್ರದಿಂದ ಸಸಿ ಬಾಡುವುದೋ ಅವರಲ್ಲಿ ದೋಷವಿದೆ ಎನ್ನಲಾಗುತ್ತಿತ್ತು.

ಗೋಧಿ ಇಲ್ಲವೇ ಜವೆ ಗೋಧಿಗಳನ್ನು ಮಣ್ಣಿನ 2 ಪರಿವಾಣಗಳಲ್ಲಿ ಮಣ್ಣುತುಂಬಿ ಅದರಲ್ಲಿ ಕಾಳುಗಳನ್ನು ಹಾಕಿ ಬೇರೆ ಬೇರೆಯಾಗಿ ಮೂತ್ರ ವಿಸರ್ಜನೆ ಮಾಡಬೇಕು. ಯಾರ ಮೂತ್ರದಿಂದ ಬೀಜಗಳು ಮೊಳಕೆ ಒಡೆಯುವುದಿಲ್ಲವೋ ಅದರಲ್ಲಿ ದೋಷವಿದೆ ಅಂತ ಹಿರಿಯರು ನಂಬಿದ್ದರು.

ಇವೆಲ್ಲ ಹಿಂದಿನ ಕೆಲವು ಹಿರಿಯರು ಪಾಲಿಸುತ್ತಿದ್ದ ಕ್ರಮಗಳಾಗಿವೆ. ಈಗ ಇವನ್ನು ಪರೀಕ್ಷೆ ಮಾಡುವ ಗೊಡವೆಗೆ ಹೋಗದೇ ನೀವು ಸೂಕ್ತ ಡಾಕ್ಟರ್ ಸಲಹೆ ಪಡೆದುಕೊಳ್ಳಿ.






Share this Story:

Follow Webdunia kannada

ಮುಂದಿನ ಸುದ್ದಿ

ಗಂಡ ಇದ್ರೂ ಅವಳ ಮಗುವಿಗೆ ನಾನೇ ಅಪ್ಪ ಆಗಬೇಕಾ?