ಅತಿಯಾದ ಲೈಂಗಿಕತೆಯಿಂದ ಅಳಿವಿನ ಅಂಚಿಗೆ ಬಂದ ಆಸ್ಟ್ರೇಲಿಯಾದ ಮಾರ್ಸ್ಪಿಯಲ್ ಗಳು

ಶನಿವಾರ, 27 ಜುಲೈ 2019 (06:49 IST)
ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ಮಾರ್ಸ್ಪಿಯಲ್ ಗಳು ಅಳಿವಿನ ಅಂಚಿಗೆ ಬರಲು ಅವುಗಳ ಅತಿಯಾದ ಲೈಂಗಿಕತೆಯೇ ಕಾರಣ ಎಂಬ ವಿಚಾರವನ್ನು ಇದೀಗ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.ಹೌದು . ಆಸ್ಟ್ರೇಲಿಯಾದ ಮಾರ್ಸ್ಪಿಯಲ್ ಗಳು ಹಾಗೂ ಆಂಟೆಕಿನಸ್ ಗಳಿಗೆ ಲೈಂಗಿಕತೆ ತುಂಬಾ ಕೆಟ್ಟದಾಗಿ ಪರಿಣಮಿಸಿದೆ. ಅವುಗಳ ಅತಿಯಾದ ಲೈಂಗಿಕತೆಯಿಂದ ಅವುಗಳು ಸಾವನಪ್ಪುತ್ತಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅವುಗಳಲ್ಲಿ ಪುರುಷ ಮಾರ್ಸ್ಪಿಯಲ್ ಗಳು ಸಂಭೋಗದ ವೇಳೆ ಹೆಣ್ಣು ಮಾರ್ಸ್ಪಿಯಲ್ ಯೊಂದಿಗೆ ತುಂಬಾ ಹಿಂಸಾತ್ಮಕವಾಗಿ ವರ್ತಿಸುತ್ತವೆ. ಅಲ್ಲದೇ ಇದು 14 ಗಂಟೆಗಳಿಗಿಂತ ಹೆಚ್ಚು ಕಾಲ ಇರುತ್ತದೆ. ಇದರಿಂದ ಅವುಗಳ ದೇಹದ ಮೇಲೆ ಹಾನಿಕಾರಕ ಪರಿಣಾಮ ಬೀರುವುದರಿಂದ  ಅವು ಸಾವನಪ್ಪುತ್ತಿವೆ.

 

ಅಲ್ಲದೇ ಪುರುಷ ಲೈಂಗಿಕತೆ ಸಿದ್ದವಾದ ಬಳಿಕ ವೀರ್ಯವನ್ನು ತಯಾರಿಸುವುದನ್ನು ನಿಲ್ಲಿಸುತ್ತವೆ. ಇದರಿಂದ ಸಂತಾನೋತ್ಪತ್ತಿ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೇ ಸಂಶೋಧಕರ ಪ್ರಕಾರ ಲೈಂಗಿಕತೆಯ ಸಮಯದಲ್ಲಿ ಪುರುಷ ಮಾರ್ಸ್ಪಿಯಲ್ ಗಳು ತಮ್ಮ ಎಲ್ಲಾ ಶಕ್ತಿಯನ್ನು ಸಂಭೋಗಕ್ಕೆ ಸೇರಿಸಿಕೊಳ್ಳುತ್ತವೆ. ಇದರಿಂದ ಅದರ ದೇಹದ ಭಾಗಗಳು ಬೇರ್ಪಡುತ್ತವೆಯಂತೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹೊರಗಡೆ ಸೆಕೆಯಿಂದ ಪರದಾಡುವವರಿಗೆ ಸೋನಿ ಕಂಪೆನಿ ತಯಾರಿಸಿದೆ ಕಿರು ಎಸಿ