ಬೆಂಗಳೂರು: ರಾತ್ರಿ ಹೊತ್ತು ಆಟೋ ಚಾಲಕನ ಅನುಮಾನಾಸ್ಪದ ವರ್ತನೆಯಿಂದ ಭಯಗೊಂಡ ಮಹಿಳೆ ಮಾಡಿದ್ದೇನು ಗೊತ್ತಾ? ಈ ಘಟನೆ ಬಗ್ಗೆ ಓದಿದರೆ ಶಾಕ್ ಆಗ್ತೀರಿ.
ಮಹಿಳೆಯ ಪತಿ ಈ ಬಗ್ಗೆ ಬೆಂಗಳೂರು ಪೊಲೀಸರ ಟ್ವೀಟ್ ಖಾತೆಯನ್ನು ಟ್ಯಾಗ್ ಮಾಡಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ನನ್ನ ಪತ್ನಿ ಬೆಂಗಳೂರಿನ ಹೊರಮಾವು ಎಂಬಲ್ಲಿಂದ ಥಣಿಸಂದ್ರ ಕಡೆಗೆ ನಮ್ಮ ಯಾತ್ರಿ ಮೂಲಕ ಆಟೋ ಬುಕ್ ಮಾಡಿದ್ದಳು. ಆದರೆ ಚಾಲಕ ಪಾನಮತ್ತನಾಗಿದ್ದ. ಆಕೆ ಸರಿಯಾದ ಲೊಕೇಷನ್ ಹೇಳಿದ್ದರೂ ಹೆಬ್ಬಾಳ ಬಳಿ ಎಲ್ಲೋ ಅಪರಿಚಿತ ಜಾಗಕ್ಕೆ ಚಾಲಕ ಕೊಂಡೊಯ್ಯುತ್ತಿದ್ದ. ಆಕೆ ಆಟೋ ನಿಲ್ಲಿಸಲು ಹೇಳಿದರೂ ಆತ ನಿಲ್ಲಿಸಲಿಲ್ಲ. ಕೊನೆಗೆ ನನ್ನ ಪತ್ನಿ ಚಲಿಸುತ್ತಿದ್ದ ಆಟೋದಿಂದ ಕೆಳಗೆ ಹಾರಿದ್ದಳು ಎಂದು ಮಹಿಳೆಯ ಪತಿ ಅಝರ್ ಖಾನ್ ಟ್ವೀಟ್ ಮಾಡಿದ್ದಾರೆ. ಅದೃಷ್ಟವಶಾತ್ ಆಟೋದಿಂದ ಜಿಗಿದರೂ ಮಹಿಳೆ ಗಾಯಗಳಿಲ್ಲದೇ ಪಾರಾಗಿದ್ದಾಳೆ. ಆಕೆ ಆಟೋದಿಂದ ಜಿಗಿದ ಬಳಿಕ ಹಿಂಬಾಲಿಸಿದ್ದ ಚಾಲಕ ಮತ್ತೆ ಆಟೋ ಒಳಗೆ ಕೂರುವಂತೆ ಒತ್ತಾಯಿಸಿದ್ದ. ಆದರೆ ಆತನ ಮನವಿ ತಿರಸ್ಕರಿಸಿ ಆನ್ ಲೈನ್ ನಲ್ಲೇ ಪಾವತಿ ಮಾಡಿ ಬೇರೊಂದು ಆಟೋ ಮೂಲಕ ಮಹಿಳೆ ಮನೆ ತಲುಪಿದ್ದಾಳೆ ಎಂದು ತಿಳಿದುಬಂದಿದೆ. ಇದು ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ನಡೆದ ಘಟನೆ. ರಾತ್ರಿ ಆಟೋದಲ್ಲಿ ಪ್ರಯಾಣಿಸುವ ಎಷ್ಟೋ ಮಹಿಳೆಯರು ಇಂತಹ ಸಮಸ್ಯೆ ಎದುರಿಸಿರಬಹುದು. ಇದು ಮಹಿಳೆಯರ ಸುರಕ್ಷತೆ ಬಗ್ಗೆ ಎಚ್ಚರಿಕೆಯ ಕರೆಗಂಟೆಯಾಗಿ ಎಂದು ಪತಿ ಅಝರ್ ಖಾನ್ ಹೇಳಿದ್ದಾರೆ.