Select Your Language

Notifications

webdunia
webdunia
webdunia
webdunia

ಉದ್ಯೋಗ ಖಾಲಿಯಿದೆ ಎಂದು ನಂಬಿಸಿ ಮೋಸ

ಉದ್ಯೋಗ ಖಾಲಿಯಿದೆ ಎಂದು ನಂಬಿಸಿ ಮೋಸ
bangalore , ಭಾನುವಾರ, 12 ಸೆಪ್ಟಂಬರ್ 2021 (20:01 IST)
ಮನೆಯಿಂದ ಆನ್‍ಲೈನ್‍ನಲ್ಲೇ ಕಾರ್ಯನಿರ್ವಹಿಸುವುದಾಗಿ (ವರ್ಕ್‍ಫ್ರಂ ಹೋಮ್) ನಂಬಿಸಿ ನಿರುದ್ಯೋಗಿಗಳಿಂದ ದಾಖಲೆ ಪಡೆದು ಅವರದ್ದೇ ಹೆಸರಿನಲ್ಲಿ ಕಂಪನಿ ತೆರೆದು ದುರುಪಯೋಗಪಡಿಸಿಕೊಳ್ಳುತ್ತಿದ್ದ ಇಬ್ಬರು ವಂಚಕರನ್ನು ಉತ್ತರ ವಿಭಾಗದ ಪೆÇಲೀಸರು ಬಂಧಿಸಿದ್ದಾರೆ. 
ತಮಿಳುನಾಡಿನ ಸಂಜೀವ್, ಸೆನ್ನಪ್ಪನ್ ಬಂಧಿತರು. ಆರೋಪಿಗಳ ನಾನಾ ಬ್ಯಾಂಕ್ ಖಾತೆಗಳಿಂದ 3.5 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಪೆÇಲೀಸರು ತಿಳಿಸಿದರು. ಕೃತ್ಯದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಚೀನಾ ಮೂಲದ ಹರ್ಮನ್ ಹಾಗೂ ತಮಿಳುನಾಡಿನ ಚಿತ್ರವೇಲು ಎಂಬ ವಂಚಕರ ಪತ್ತೆಗೆ ಪೆÇಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. 
ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಉದ್ಯೋಗ ಖಾಲಿಯಿದೆ. ಮನೆಯಲ್ಲೇ ಕುಳಿತು ಲಕ್ಷ ಲಕ್ಷ ಎಣಿಸುವ ಅದೃಷ್ಟ ನಿಮ್ಮದಾಗಲಿದೆ ಎಂದು ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡುತ್ತಿದ್ದರು. ನಿರುದ್ಯೋಗಿಗಳಿಂದ ಆಧಾರ್, ಪಾನ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪಡೆದು ನಿರುದ್ಯೋಗಿಗಳ ಹೆಸರಿನಲ್ಲೇ ಕಂಪನಿ ತೆರೆದು ನೂರಾರು ಗ್ರಾಹಕರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದರು ಎಂಬ ಸಂಗತಿ ಪೆÇಲೀಸರಿಂದ ಬೆಳಕಿಗೆ ಬಂದಿದೆ.
ಗ್ರಾಹಕರು ಹಣ ನೀಡುವಂತೆ ತ್ತಾಯಿಸಿದಾಗ ಆರೋಪಿಗಳು ಕಂಪನಿಯನ್ನು ಬಂದ್ ಮಾಡಿದ್ದಾರೆ. ತಮ್ಮ ಮೊಬೈಲ್‍ಗಳನ್ನು ಕೂಡ ಸ್ವಿಚ್‍ಆಫ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಆರೋಪಿಗಳ ಹೆಸರಿನಲ್ಲಿದ್ದ 11 ಕಂಪನಿಯ ಖಾತೆಗಳಲ್ಲಿನ ಹಣವನ್ನು ವಶಕ್ಕೆ ಪಡೆಯಲಾಗಿದೆ.  ನಾಲ್ಕು ಸಾವಿರ ಮುಗ್ದ ಜನರ ಹೆಸರಿನಲ್ಲಿ ಚೀನಾ ವಂಚಕರು ಕಂಪನಿ ತೆರೆದಿದ್ದಾರೆ ಎನ್ನುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿನಲ್ಲಿ ಹಿಂದೂ ದೇವಾಲಯ ನೆಲಸಮ