ಬೆಳಗಾವಿ: ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಇದೀಗ ಸರ್ಕಾರಕ್ಕೆ ಕೊನೆಯ ಎಚ್ಚರಿಕೆ ನೀಡಿದ್ದಾರೆ. ಇದೂ ಈಡೇರದಿದ್ದರೆ ಪ್ರತಿಭಟನೆ ಇನ್ನೊಂದು ಹಂತಕ್ಕೆ ಹೋಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಿನ್ನೆ ಸಚಿವ ಶಿವಾನಂದ ಪಾಟೀಲ್ ಕಬ್ಬು ಬೆಳೆಗಾರರ ಜೊತೆ ಸಂಧಾನ ನಡೆಸಲು ಬಂದಿದ್ದರು. ಆದರೆ ಈ ವೇಳೆ ಅವರ ವಿರುದ್ಧ ಘೋಷಣೆ ಕೂಗಿ ಸಾಗ ಹಾಕಿದ್ದಾರೆ. ಆಗ ಸಚಿವರು ಎರಡು ದಿನ ಸಮಯಾವಕಾಶ ಕೇಳಿದ್ದರು. ಆದರೆ ಎರಡು ದಿನ ಆಗಲ್ಲ, ನಾಳೆ ಸಂಜೆಯೊಳಗೆ ತೀರ್ಮಾನ ಮಾಡಬೇಕು ಎಂದು ಡೆಡ್ ಲೈನ್ ಕೊಟ್ಟಿದ್ದಾರೆ.
ಅಷ್ಟರೊಳಗೆ ಕಬ್ಬಿಗೆ ಪ್ರತಿ ಕ್ವಿಂಟಾಲ್ ಗೆ 3500 ರೂ. ನಿಗದಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರ 3,000 ರೂ. ಆಫರ್ ನೀಡಿದೆ. ಆದರೆ ರೈತರು ಇದಕ್ಕೆ ಒಪ್ಪುತ್ತಿಲ್ಲ. 3,500 ರೂ. ನಿಗದಿ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಈ ನಡುವೆ ರೈತರ ಸಮಸ್ಯೆ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ ಚರ್ಚೆಗೆ ಅವಕಾಶ ನೀಡುವಂತೆ ಸಮಯಾವಕಾಶ ಕೇಳಿದ್ದಾರೆ. ಹೀಗಾಗಿ ಇಂದು ಸರ್ಕಾರ ಯಾವ ತೀರ್ಮಾನಕ್ಕೆ ಬರುವುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.