ಬೆಳಗಾವಿ: ಆರ್ ಎಸ್ಎಸ್ ಪಥಸಂಚಲನ ಮಾಡಲು ಅನುಮತಿ ಬೇಕು. ಆದರೆ ಎಂಇಎಸ್ ನವರಿಗೆ ಇದು ಅನ್ವಯವಾಗಲ್ವಾ? ಹೀಗಂತ ರಾಜ್ಯ ಸರ್ಕಾರವನ್ನು ವಿಪಕ್ಷ ಬಿಜೆಪಿ ಪ್ರಶ್ನೆ ಮಾಡಿದೆ.
ಇಂದು ಕನ್ನಡ ಜನ ರಾಜ್ಯೋತ್ಸವ ಆಚರಿಸುತ್ತಿದ್ದರೆ ಅತ್ತ ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯ ಪುಂಡರು ಕರಾಳ ದಿನ ರಾಲಿ ನಡೆಸಿದ್ದಾರೆ. ಈ ರಾಲಿ ನಡೆಸಲು ಯಾವುದೇ ಪೂರ್ವಾನುಮತಿಯೂ ಬೇಡವೇ? ಇದರ ಬಗ್ಗೆ ಯಾಕೆ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಸರ್ಕಾರವನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.
ಆರೆಸ್ಸೆಸ್ ಪಥಸಂಚಲನಕ್ಕೆ ಹತ್ತಾರು ಷರತ್ತು, ಅನುಮತಿ ನಿರಾಕರಣೆ ! ನಾಡದ್ರೋಹಿಗಳ ಪುಂಡಾಟಕ್ಕೆ ಪೂರ್ಣ ಸ್ವಾತಂತ್ರ್ಯ ! ರಾಜ್ಯೋತ್ಸವದಂದು MES ಕಾರ್ಯಕರ್ತರ ನಾಡದ್ರೋಹಿ ರ‍್ಯಾಲಿಗೆ ಕಾಂಗ್ರೆಸ್ ಸರ್ಕಾರದ ಪೂರ್ಣ ಬೆಂಬಲವೇ ?
ಮಾನ್ಯ ಮುಖ್ಯಮಂತ್ರಿಗಳೇ, ರಾಜ್ಯದ ವಿರುದ್ಧ ಧ್ವನಿ ಎತ್ತುತ್ತಿರುವ MES ಪುಂಡರ ರ‍್ಯಾಲಿಗೆ ಅನುಮತಿ ಕೊಟ್ಟಿದ್ದು ಯಾಕೆ ? ನಿಮ್ಮ ನಾಡದ್ರೋಹಿ ನೀತಿಯನ್ನು ಜನತೆ ಗಮನಿಸುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರವನ್ನೂ ನೀಡುತ್ತಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.