ಬೆಂಗಳೂರು: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಆರ್ ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ ವಿಶೇಷ ಸಂದೇಶ ನೀಡಿದ್ದು, ಕರ್ನಾಟಕದ ದತ್ತುಪುತ್ರ ನಾನು ಎಂದಿದ್ದಾರೆ.
ಕರ್ನಾಟಕದ ಜನತೆಗೆ ಧನ್ಯವಾದ ಸಲ್ಲಿಸಿರುವ ಅವರು ವಿಶೇಷ ವಿಡಿಯೋ ಸಂದೇಶದ ಮೂಲಕ ಕನ್ನಡ ರಾಜ್ಯೋತ್ಸವಕ್ಕೆ ಶುಭ ಕೋರಿದ್ದಾರೆ. ಜೊತೆಗೆ ಈ ವಿಡಿಯೋದಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಹಾಡಿ ಹೊಗಳಿದ್ದಾರೆ.
ಕರ್ನಾಟಕದ ದತ್ತುಪುತ್ರನಂತಿರುವ ನಾನು ಈ ವಿಶೇಷ ಸಂದರ್ಭದಲ್ಲಿ ಕರ್ನಾಟಕದ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಳ್ಳಲು ಖುಷಿಯಾಗುತ್ತಿದೆ. ಕರ್ನಾಟಕದ ಸೌಂದರ್ಯ, ಸಂಸ್ಕೃತಿ ಬಗ್ಗೆ ಕೆಲವು ಮಾತನಾಡಬೇಕು. ಬೆಟ್ಟ, ಗುಡ್ಡಗಳಿಂದ ಹಿಡಿದು ಟೆಕ್ ಪಾರ್ಕ್ ವರೆಗೆ ಕರ್ನಾಟಕಕ್ಕೆ ಶಾಂತಿ ಮತ್ತು ಶಕ್ತಿಯ ವಿರಳ ಗುಣವಿದೆ. ಕಳೆದ ಕೆಲವು ವರ್ಷಗಳಿಂದ ನಿಮ್ಮ ಪ್ರೀತಿಯನ್ನು ನಾನು ಅನುಭವಿಸಿದ್ದೇವೆ. ಈಗ ನಾನು ಆರ್ ಸಿಬಿ ಕೋಚ್ ಆಗಿ ಈ ರಾಜ್ಯದೊಂದಿಗೆ ಕ್ರಿಕೆಟ್ ಹೊರತಾದ ವಿಶೇಷ ಸಂಬಂಧ ನನಗಿದೆ. ಈ ರಾಜ್ಯೋತ್ಸವದಂದು ಎಲ್ಲರಿಗೂ ಶುಭಾಶಯ ಕೋರುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ಹೌದು ನೀವು ಕರ್ನಾಟಕದ ದತ್ತುಪುತ್ರನೇ. ನಿಮ್ಮ ಈ ಶುಭಾಶಯಕ್ಕೆ ಧನ್ಯವಾದಗಳು ಡಿಕೆ ಎಂದು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.