Select Your Language

Notifications

webdunia
webdunia
webdunia
webdunia

ಸಂಕಷ್ಟಕ್ಕೆ ಬಾರದ ಸಿದ್ದರಾಮಯ್ಯನವರು ಬೆಳಗಾವಿಗೆ ಬಿರಿಯಾನಿ ತಿನ್ನಲು ಬರುತ್ತಿದ್ದಾರೆ: ಅಶೋಕ

CM Siddaramaiah

Sampriya

ಬೆಳಗಾವಿ , ಶುಕ್ರವಾರ, 3 ಅಕ್ಟೋಬರ್ 2025 (14:38 IST)
ಬೆಳಗಾವಿ: ಮಳೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಸಂಕಷ್ಟ ಒಳಗಾದವರನ್ನು ಭೇಟಿಯಾಗಲು ಹಿಂದೇಟು ಹಾಕಿದ ಸಿಎಂ ಸಿದ್ದರಾಮಯ್ಯ ಅವರು ಶನಿವಾರ ಬೆಳಗಾವಿಗೆ ಬಿರಿಯಾನಿ ತಿನ್ನಲು ಬರುತ್ತಿದ್ದಾರೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌ ಅಶೋಕ ಲೇವಡಿ ಮಾಡಿದ್ದಾರೆ. 

ಅವರು ಬೈಲಹೊಂಗಲ ತಾಲ್ಲೂಕಿನ ನಾಗನೂರ ಗ್ರಾಮದಲ್ಲಿ ಶುಕ್ರವಾರ ನಡೆದ ರೈತರ ಸಭೆಯಲ್ಲಿ ಈ ಸಂಬಂಧ ಮಾತನಾಡಿದ್ದಾರೆ. 

ಮಳೆಯಿಂದ ಸಂಕಷ್ಟಗೀಡಾದ ಸಂದರ್ಭದಲ್ಲಿ ಜಿಲ್ಲೆಗೆ ಬಾರದ ಸಿದ್ದರಾಮಯ್ಯನವರು ಇದೀಗ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಬರುತ್ತಿದ್ದಾರೆ. ಅಲ್ಲಿಗೆ ಬಂದು ಬಿರಿಯಾನಿ ತಿಂದು ಹೋಗುತ್ತಾರೆ. ಆದರೆ, ನಾವು ರೈತರ ಸಮಸ್ಯೆ ಆಲಿಕೆಗಾಗಿ ಬಂದಿದ್ದೇವೆ ಎಂದರು.

ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿ ಎರಡು ತಿಂಗಳಾಗಿದೆ. ಆಗ ರೈತರ ಜಮೀನುಗಳತ್ತ ಸುಳಿಯದ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್ ಇಂದು ನಾವು ಬಂದಿದ್ದೇವೆ ಇಲ್ಲಿಗೆ ಧಾವಿಸಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಮಳೆಯಿಂದ ಆಗಿರುವ ಹಾನಿಗೆ ಎನ್‌ಡಿಆರ್‌ಎಫ್ ಅನುದಾನ ನೀಡಲಾಗಿದೆ. ವಿಪತ್ತು ನಿರ್ವಹಣೆಗಾಗಿ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಿಗೂ ಕೇಂದ್ರ ಸರ್ಕಾರ ಅನುದಾನ ಕೊಟ್ಟಿದೆ. ಆದರೆ, ರಾಜ್ಯ ಸರ್ಕಾರ ಅದನ್ನು ತನ್ನ ಉಚಿತ ಯೋಜನೆಗಳಿಗೆ ಬಳಸಿಕೊಂಡಿದೆ ಎಂದು ಆಪಾದಿಸಿದರು.

ಜಿಲ್ಲೆಗೆ ಕೇಂದ್ರದಿಂದ ಅನುದಾನ ನೀಡಬೇಕಿದೆ. ಇದಕ್ಕಾಗಿ ರಾಜ್ಯ ಸರ್ಕಾರದಿಂದ ಹಾನಿಯ ವರದಿ ಸಲ್ಲಿಸಬೇಕಿದ್ದು, ಆದರೆ ಇದುವರೆಗೆ ವರದಿ ಸಲ್ಲಿಸದೆ ಕೇಂದ್ರ ಹಣ ಕೊಡುವತ್ತಿಲ್ಲ ಎಂದು ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಗುತ್ತಿಗೆದಾರರ ಪತ್ರ ಓದಿ ನಿಮಗೆ ನಾಚಿಕೆ ಆಗಲಿಲ್ಲವೇ: ಸಿ.ಟಿ.ರವಿ