ಪಾಕಿಸ್ತಾನದಲ್ಲಿ ಆರ್ಥಿಕತೆ ದುಸ್ಥಿತಿ ತಲುಪಿದ್ದು, ಆಹಾರದ ಬೆಲೆ ಗಗನಕ್ಕೇರಿದೆ. ಹೀಗಾಗಿ ಜನರಿಗೆ ಜೀವನ ಮಾಡುವುದು ಕಷ್ಟವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಜನರು ಪಶ್ಚಿಮ ಏಷ್ಯಾದ ರಾಷ್ಟ್ರಗಳಿಗೆ ವಲಸೆ ಹೋಗಲು ಆರಂಭಿಸಿದ್ದಾರೆ. ಇವರೆಲ್ಲರೂ ಉಮ್ರಾ ವೀಸಾ ಪವಿತ್ರ ಸ್ಥಳಗಳ ಭೇಟಿಗಾಗಿ ಕೊಡುವ ವೀಸಾಗಳನ್ನು ಪಡೆದುಕೊಂಡು ಸೌದಿ ಅರೇಬಿಯಾಗೆ ತೆರಳಿ ಅಲ್ಲಿ ಭಿಕ್ಷೆ ಬೇಡಲು ಆರಂಭಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಮೆಕ್ಕಾದ ಗ್ರಾಂಡ್ ಮಸೀದಿಯ ಬಳಿ ಜೇಬುಗಳ್ಳತನ ಆರೋಪದಡಿ ಬಂಧನಕ್ಕೊಳಪಟ್ಟ ಬಹುತೇಕ ಕಳ್ಳರು ಪಾಕಿಸ್ತಾನಿಯರೇ ಆಗಿದ್ದಾರೆ. ಹೀಗೆ ವಿದೇಶಗಳಿಗೆ ಹೋದ ಭಿಕ್ಷುಕರಲ್ಲಿ ಶೇ.90ರಷ್ಟು ಮಂದಿ ಸೌದಿ ಅರೇಬಿಯಾ ಮತ್ತು ಇರಾಕ್‌ನಲ್ಲಿ ಜೈಲು ಪಾಲಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.