ಯಾರಿಗಾದರೂ ತಮ್ಮ ದೇಶ ಬಿಟ್ಟು ವಿದೇಶಕ್ಕೆ ಹೋಗುವುದೆಂದರೆ ಒಂದು ರೀತಿಯ ಭಯ ಮತ್ತು ಆತಂಕ ಇದ್ದೇ ಇರುತ್ತದೆ. ಅಲ್ಲಿ ಹೇಗೋ? ಏನೋ ಅನ್ನುವಂತಹ ಅನೇಕ ಪ್ರಶ್ನೆಗಳು ಅವರನ್ನು ಕಾಡಲು ಶುರು ಮಾಡಿರುತ್ತವೆ ಅಂತ ಹೇಳಬಹುದು. ಆದರೆ ಅದೇ ವಿದೇಶಿಯರು ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರೆ ಆ ಭಯ ಮತ್ತು ಆತಂಕ ಎಲ್ಲವೂ ಕ್ಷಣ ಮಾತ್ರದಲ್ಲಿಯೇ ಆನಂದದಾಯಕ ಅನುಭವವಾಗಿ ಬದಲಾಗುತ್ತದೆ ಅಂತ ಹೇಳಿದರೆ ಸುಳ್ಳಲ್ಲ. ಅದರಲ್ಲೂ ಭಾರತದಿಂದ ಪಾಕಿಸ್ತಾನಕ್ಕೆ ಮೊದಲನೇ ಸಲ ಹೋದಾಗ ಆ ಭಯ ಮತ್ತು ಆತಂಕ ಸ್ವಲ್ಪ ಮಟ್ಟಿಗೆ ಹೆಚ್ಚಿಗೆ ಇರುತ್ತದೆ. ತಮ್ಮ ಮಗಳ ಟೆನಿಸ್ ಪಂದ್ಯಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಭಾರತೀಯ ಕುಟುಂಬಕ್ಕೂ ಸಹ ಪಾಕಿಸ್ತಾನದಲ್ಲಿ ಹೇಗೋ ಏನೋ ಅನ್ನೋ ಭಯ ಇತ್ತಂತೆ. ಆದರೆ ಅವರು ಒಬ್ಬರಿಗೆ ಪಾಕಿಸ್ತಾನದಲ್ಲಿ ಕಾರಿನಲ್ಲಿ ಲಿಫ್ಟ್ ಕೇಳಿದ ನಂತರ ಆ ಭಯ ಎಲ್ಲಾ ಮಾಯ ಅಯ್ತಂತೆ. ಅಲ್ಲಿನ ಸ್ಥಳೀಯ ನಿವಾಸಿಯೊಬ್ಬರು ಅವರನ್ನು ಸ್ವಾಗತಿಸಿದರು ಮತ್ತು ಅವರಿಗೆ ಹೈದರಾಬಾದಿ ಬಿರಿಯಾನಿ ಪಾರ್ಟಿ ನೀಡಿ ಅವರನ್ನು ಸಂತೋಷ ಪಡಿಸಿದ್ದಾರೆ. ಈ ಹೃದಯಸ್ಪರ್ಶಿ ಘಟನೆಯನ್ನು ಸೆರೆಹಿಡಿದಿರುವ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.