Select Your Language

Notifications

webdunia
webdunia
webdunia
webdunia

ಖ್ಯಾತ ಎಂಪೈರ್ ಹೋಟೇಲ್ ಮ್ಯಾನೇಜರ್ ಮೇಲೆ ಎಫ್ ಐ ಆರ್

ಖ್ಯಾತ ಎಂಪೈರ್ ಹೋಟೇಲ್ ಮ್ಯಾನೇಜರ್ ಮೇಲೆ ಎಫ್ ಐ ಆರ್
bangalore , ಗುರುವಾರ, 17 ನವೆಂಬರ್ 2022 (13:47 IST)
ಬೆಂಗಳೂರಿನ ಪ್ರಖ್ಯಾತ ಎಂಪೈರ್ ಹೋಟೇಲ್ ಮ್ಯಾನೇಜರ್ ಮೇಲೆ ಎಫ್ ಐ ಆರ್ ದಾಖಲಾಗಿದೆ.ಅವಧಿ ಮೀರಿ ತಡರಾತ್ರಿಯವರೆಗೂ ಗ್ರಾಹಕರಿಗೆ ಆಹಾರ ಪೂರೈಕೆ  ಮಾಡುತ್ತಿದ್ದ ಆರೋಪದ ಹಿನ್ನೆಲೆ ಕೋರಮಂಗಲದ 5 ನೇ ಬ್ಲಾಕ್ ನಲ್ಲಿರುವ ಎಂಪೈರ್ ಹೋಟೆಲ್ ನಲ್ಲಿ,ಸಾಮಾನ್ಯವಾಗಿ ರಾತ್ರಿ 1 ಗಂಟೆಯವರೆಗೂ  ಹೋಟೆಲ್ ನಡೆಸಲು ಅವಕಾಶವಿದೆ..ಆದ್ರೆ ಕೋರಮಂಗಲದ ಎಂಪೈರ್ ಹೋಟೆಲ್ ನಲ್ಲಿ ತಡರಾತ್ರಿ 2 ಗಂಟೆಯಾದ್ರು ಮುಚ್ಚಿರಲಿಲ್ಲ. ಗ್ರಾಹಕರು ಕೂಗಾಡುತ್ತಾ ಇತರರಿಗೂ ತೊಂದರೆ ಕೊಡುತ್ತಿದ್ದರು.ಇದೇ ವೇಳೆ ಗಸ್ತಿನಲ್ಲಿ ಕೋರಮಂಗಲದ ಠಾಣಾ ಸಿಬ್ಬಂಧಿ ಹೋಟೆಲ್ ಗೆ ತೆರಳಿ ವಿಚಾರಿಸಿದ್ದಾರೆ..ಈ ವೇಳೆ ಅನುಮತಿ ಇಲ್ಲದೆ 2 ಗಂಟೆಯವರೆಗೂ ಹೋಟೆಲ್ ನಡೆಸುತ್ತಿರೋದು ತಿಳಿದು ಬಂದಿದೆ.ಹೀಗಾಗಿ ಎಂಪೈರ್ ಹೋಟೆಲ್ ಮ್ಯಾನೇಜರ್ ಇಕ್ಬಲ್ ಮೇಲೆ ಎಫ್ ಐ ಆರ್ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ 6 ಕಡೆ ಹೊಸ ನಗರಗಳ ನಿರ್ಮಾಣ : ಬೊಮ್ಮಾಯಿ