Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗಳ ಸಂಖ್ಯೆ 10 ಸಾವಿರಕ್ಕೆ ಏರಿಕೆ !?

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗಳ ಸಂಖ್ಯೆ 10 ಸಾವಿರಕ್ಕೆ ಏರಿಕೆ !?
bangalore , ಗುರುವಾರ, 17 ನವೆಂಬರ್ 2022 (12:57 IST)
ಬೆಂಗಳೂರಿನಲ್ಲಿ 10 ಸಾವಿರ ಬಸ್ ಗಳನ್ನ ಏರಿಸಲು ಬಿಎಂಟಿಸಿ ಪ್ಲಾನ್ ಮಾಡಿದೆ.ಸದ್ಯ 6500 ಬಸ್ ಗಳನ್ನ ಬಿಎಂಟಿಸಿ ಹೊಂದಿದೆ.ಈ ಬಸ್ ಗಳಿಗೆ ಡ್ರೈವರ್ ಗಳಿಲ್ಲದೇ ನಿಗಮ ರೂಟ್ ಕ್ಯಾನ್ಸಲ್ ಮಾಡ್ತಿದೆ.ಇದರ ನಡುವೆ ಬಸ್ ಗಳ ಸಂಖ್ಯೆ 10 ಸಾವಿರಕ್ಕೇರಿಸಲು ನಿಗಮ ತೀರ್ಮಾನಮಾಡಿದೆ.ಜೊತೆಗೆ ಬಸ್ ಗಳಿಗೆ ಬೇಕಾದ ಜಾಗ ಒದಗಿಸಲು ಸರ್ಕಸ್‌ ಮಾಡ್ತಿದೆ.ಒಂದ್ಕಡೆ ಡೀಸೆಲ್ ಬಸ್, ಇನ್ನೊಂದ್ಕಡೆ ಎಲೆಕ್ಟ್ರಿಕ್ ಬಸ್ ಎರಡೂ ಸೇರಿ ಬಸ್ ಗಳ ಸಂಖ್ಯೆ 10 ಸಾವಿರಕ್ಕೇರಿಸಲು ನಿಗಮ ಪ್ಲಾನ್ ಮಾಡಿದೆ.ಈಗ ಹೊಸ ಬಸ್ ಗಳಿಗೆ ಜಾಗ ಇಲ್ಲದೇ ಬಿಎಂಟಿಸಿ ಹೆಣಗಾಟ ನಡೆಸುತ್ತಿದೆ.
 
ಹೊಸ ಬಸ್ ಗಳಿಗಾಗಿ ನೂತನ ಡಿಪೋ ನಿರ್ಮಾಣ ಮಾಡಿದ್ದು,ಎಲೆಕ್ಟ್ರಿಕ್ ಬಸ್ ಗೆ ಬೇಕಾದ ಚಾರ್ಜಿಂಗ್ ಪಾಯಿಂಟ್ ನಿರ್ಮಾಣಕ್ಕೂ ನಿಗಮ ಸರ್ಕಸ್ ಮಾಡ್ತಿದೆ.ಆರ್ಥಿಕ ಸಂಕಷ್ಟದ ನಡುವೆ ಇನ್ಫಾಸ್ಟ್ರಕ್ಚರ್ ಕಲ್ಪಿಸೋದೇ ಚಾಲೆಂಜ್.ಈಗಾಗಲೇ ನಗರದ ಹೊರ ವಲಯದಲ್ಲಿ ಹೊಸ ಡಿಪೋ ನಿರ್ಮಾಣಕ್ಕೆ ಪ್ಲಾನ್ ಮಾಡಿದ್ದು,ಹೊಸದಾಗಿ 5 ಡಿಪೋ ನಿರ್ಮಾಣಕ್ಕೆ ಬಿಎಂಟಿಸಿ ಮುಂದಾಗಿದೆ.ಆರ್ಥಿಕ ಸಂಕಷ್ಟದಲ್ಲಿ ಈ ಉಸಾಬರಿ ಬೇಕಿತ್ತಾ ಅನ್ನೋದೆ ಪ್ರಶ್ನೆ ಈಗ ಎದುರಾಗಿದೆ.ಸದ್ಯ ಸಂಬಳ ಭತ್ಯೆ ಕೊಡಲು ಬಿಎಂಟಿಸಿ ಹೆಣಗಾಡ್ತಿದೆ.ಬಿಎಂಟಿಸಿ ಬಸ್ ಗಳಿಗೆ ಡ್ರೈವರ್ ಗಳಿಲ್ಲದೇ ನಿಂತಲ್ಲೇ  ಬಸ್ ಗಳು ನಿಂತಿವೆ.ಹೀಗಿದ್ದಾಗ ಬಸ್ ಗಳ ಸಂಖ್ಯೆ ಹೆಚ್ಚಿಸೋ ಅಗತ್ಯ ಏನಿದೆ..?ಜೊತೆಗೆ ಬಸ್ ಗಳಿಗೆ ಇನ್ಫಾಸ್ಟ್ರಕ್ಚರ್ ಕಲ್ಪಿಸೋ ಹೆಸರಲ್ಲಿ ಕೋಟಿ ಕೋಟಿ ಖರ್ಚು ಮಾಡೋ ಅಗತ್ಯವೇನಿದೆ..? ಎಂದು ಬಿಎಂಟಿಸಿ ಅಂಥಾ ದರ್ಬಾರ್ ಬಗ್ಗೆ ಪ್ರಶ್ನೆ ಮಾಡುತ್ತಾ ಆಕ್ರೋಶ ಹೊರಹಾಕ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆಯಿಂದ ದೂರ ಉಳಿದ ಅಜಂ ಖಾನ್ ಕುಟುಂಬ