Publish Date: Thu, 17 Nov 2022 (11:29 IST)
Updated Date: Thu, 17 Nov 2022 (13:05 IST)
ಹಾಸನ : ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಹಾಗೂ ಹಾಸನದಲ್ಲಿರುವ ಅವರ ಅಳಿಯನ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಮುಖಂಡೆ ಹಾಗೂ ಅವರ ಅಳಿಯನಿಗೆ ಐಟಿ ಶಾಕ್ ನೀಡಿದೆ. ಚಿಕ್ಕಮಗಳೂರು ನಗರದ ಹೂವಿನ ಮಾರ್ಕೆಟ್ ರಸ್ತೆಯಲ್ಲಿರುವ ನಿವಾಸ ಹತ್ತಕ್ಕೂ ಹೆಚ್ಚು ವಾಹನಗಳಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಇನ್ನೂ ಚಿಕ್ಕಮಗಳೂರು ತಾಲೂಕಿನ ಮರ್ಲೆ ಕಲ್ಲಿನ ಕ್ರಷರ್, ಗಾಯಿತ್ರಿ ಶಾಂತೇಗೌಡ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರ ಮನೆ ಹಾಗೂ ಬೇಲೂರಿನಲ್ಲಿರುವ ಅಳಿಯನ ನಿವಾಸದ ಮೇಲೂ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ.