Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಟಿಕೇಟ್ ಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತಾರಣೆ..!

Extension of application period for Congress ticket
bangalore , ಮಂಗಳವಾರ, 15 ನವೆಂಬರ್ 2022 (19:30 IST)
ಮುಂಬರುವ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿತ್ತು. ಕೊಂಚ ದುಬಾರಿ ಶುಲ್ಕ ವಿಧಿಸಿದ್ದರೂ, ಕೈ ಪಾಳಯದಲ್ಲಿ ಆಕಾಂಕ್ಷಿಗಳ ಉತ್ಸಾಹ ಕುಗ್ಗಿಲ್ಲ. ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ನ.5 ರಿಂದ 15ರವರೆಗೆ ಅರ್ಜಿ ನಮೂನೆ ಪಡೆದು ಸಲ್ಲಿಕೆ ಮಾಡಲು ಕಾಂಗ್ರೆಸ್ ಕಾಲಾವಕಾಶ ನೀಡಿತ್ತು. ಕಾಂಗ್ರೆಸ್ ಟಿಕೇಟ್ ಅರ್ಜಿ ಸಲ್ಲಿಸಲು ಇಂದು ಕೊನೆ ದಿನ ಎಂದು ದೊಡ್ಡ ಮಟ್ಟದಲ್ಲಿ ಸ್ಪಂಧನೆ ಕಂಡುಬಂದಿದೆ. ಆದ್ರೆ ಈವರೆಗೂ ಕಾಂಗ್ರೆಸ್ ನ ಘಟಾನುಘಟಿ ನಾಯಕರು ಹಾಗೂ 30 ಕ್ಕೂ ಹೆಚ್ಚು ಹಾಲಿ ಶಾಸಕರು ಅರ್ಜಿ ಹಾಕಿಲ್ಲ. ಆದ್ದರಿಂದ ನವೆಂಬರ್ 21 ರವರೆಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆಯನ್ನ ರಾಜ್ಯ ಕಾಂಗ್ರೆಸ್ ಮಾಡಿದೆ. ಇನ್ನೂ ಒಂದೇ ಕ್ಷೇತ್ರದಿಂದ 10 ರಿಂದ 14 ಅರ್ಜಿಗಳು ಸಲ್ಲಿಕೆ ಆಗಿವೆ  ಶಿವಮೊಗ್ಗ ನಗರಕ್ಕೆ 17 ವಿಜಯಪುರ ಸಿಟಿ 13 ,ದಾಸರಹಳ್ಳಿ 13, ಬಳ್ಳಾರಿ ಹಾಗೂ ಹರಪನಹಳ್ಳಿಗೆ 13 ಅರ್ಜಿ ಗಳು ಸಲ್ಲಿಕೆ ಆಗಿದ್ದು. ಒಟ್ಟು ಸುಮಾರು 1356 ಅರ್ಜಿ ಖರೀದಿ 600 ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ ಆಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ವಿರುದ್ದ ಘೋಷಣೆ ಕೂಗಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು