Publish Date: Tue, 15 Nov 2022 (19:14 IST)
Updated Date: Tue, 15 Nov 2022 (19:16 IST)
ನಿನ್ನೆ ಸಫಾರಿ ವೇಳೆ ಪ್ರವಾಸಿಗರ ಕಣ್ಣಿಗೆ ಹುಲಿಯೊಂದು ಕಾಣಿಸಿಕೊಂಡಿದೆ. ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ ದಮ್ಮನಕಟ್ಟೆ ಸಫಾರಿಯಲ್ಲಿ ಹುಲಿ ಕಾಣಿಸಿಕೊಂಡಿದೆ. ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಹುಲಿ ಹರಸಾಹಸ ಪಟ್ಟಿದೆ. ಬಿಸಿಲು ತಾಳಲಾರದೆ ಏದುಸಿರು ಬಿಡುತ್ತಾ ಕಾಡಿನ ನೀರಿನ ಹೊಂಡದಲ್ಲಿ ಹುಲಿ ಮಲಗಿಕೊಂಡಿದೆ. ಹುಲಿಯ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ.