Select Your Language

Notifications

webdunia
webdunia
webdunia
webdunia

ಚಿಕ್ಕಮಗಳೂರಿನಲ್ಲಿ ಬಿಜೆಪಿ ರಣಕಹಳೆ

ಚಿಕ್ಕಮಗಳೂರಿನಲ್ಲಿ ಬಿಜೆಪಿ ರಣಕಹಳೆ
Chikkamagalur , ಮಂಗಳವಾರ, 15 ನವೆಂಬರ್ 2022 (17:36 IST)
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಣಕಹಳೆ ಮೊಳಗಿಸಿದೆ. ಇಂದು ಕಡೂರಿನಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ, ಸಿಎಂ ಬೊಮ್ಮಾಯಿ, ಬಿಎಸ್‌ವೈ, ಪಕ್ಷದ ಕಾರ್ಯಕರ್ತರು ಸೇರಿ ಹಲವರು ಭಾಗಿಯಾಗಿದ್ರು.ಇನ್ನು 600 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ್ರು. ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಸಿಎಂ, ಬಿಜೆಪಿ ಜನಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದ್ದು ಭಾರೀ ಜನಸ್ತೋಮವೇ ಸೇರಿದೆ. ಬೆಳ್ಳಿ ಪ್ರಕಾಶ್‌ ನನ್ನ ನೋಡುವುದೇ ಚಂದ, ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದಾರೆ ಅಂತ ಕಡೂರು ಶಾಸಕರನ್ನ ಹಾಡಿ ಹೊಗಳಿದರು. ಜನ ಶಕ್ತಿಯನ್ನ ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ. 2023ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಇಷ್ಟು ಜನ ಸೇರಿದ್ರೂ ಸಿದ್ದರಾಮಯ್ಯ ನಂಬಲ್ಲ, ಇಲ್ಲಿ ಬಂದು ಒಂದು ರೌಂಡ್‌ ಹಾಕಲಿ’ ಎಂದು ತಮ್ಮ ಯಾತ್ರೆಗೆ ಬೆಂಬಲ ಸಿಕ್ಕುತ್ತಿರುವುದನ್ನು ಸಮರ್ಥಿಸಿಕೊಂಡರು. 

Share this Story:

Follow Webdunia kannada

ಮುಂದಿನ ಸುದ್ದಿ

ಹಂತಕ ಅಫ್ತಾಬ್‌ನ ಭಯಾನಕ ಹಿಸ್ಟರಿ