ಮುಂಬೈನಲ್ಲಿ ಆರಂಭವಾಗಿ ದೆಹಲಿಯಲ್ಲಿ ಕ್ರೂರ ಅಂತ್ಯ ಕಂಡಿದೆ ಈ ಪ್ರೇಮ ಕಹಾನಿ. ಅಷ್ಟಕ್ಕೂ ಯುವಕನ ತಲೆಯಲ್ಲಿ ಇಂತಹ ಭಯಾನಕ ಐಡಿಯಾ ಎಲ್ಲಿಂದ ಬಂತು ಎಂಬ ಪ್ರಶ್ನೆ ಸದ್ಯ ಎಲ್ಲರನ್ನೂ ಕಾಡುತ್ತಿದೆ. ಈ ವೆಬ್ ಸಿರೀಸ್‌ನಿಂದ ಇಂತಹ ಕ್ರೂರ ಐಡಿಯಾ ಏನಾದ್ರೂ ಸಿಕ್ತಾ ಎಂಬ ಅನುಮಾನ ಎಲ್ಲರನ್ನೂ ಕಾಡಲಾರಂಭಿಸಿದೆ. ದೆಹಲಿಯಲ್ಲಿ ನಡೆದ ಹೃದಯ ವಿದ್ರಾವಕ ರಕ್ತಸಿಕ್ತ ಪ್ರೇಮಕಥೆಯನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಈ ಪ್ರಕರಣದಲ್ಲಿ ಹಲವು ಹೊಸ ಸಂಗತಿಗಳು ಬೆಳಕಿಗೆ ಬಂದಿವೆ. ಕೆದಕಿದಷ್ಟು ಆಳವಾಗಿ ಸಾಗುತ್ತಿದೆ ಈ ಪ್ರಕರಣ. ಯಾರೂ ಊಹಿಸಲೂ ಸಾಧ್ಯವಾಗದಷ್ಟು ಪ್ರೀತಿಸುತ್ತಿದ್ದ ಶ್ರದ್ಧಾಳನ್ನು ಪ್ರೇಮಿ ಅಫ್ತಾಬ್ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ನಂತರ ಸಾಕ್ಷ್ಯ ನಾಶಪಡಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾನೆ. ಶ್ರದ್ಧಾಳ ಮೃತದೇಹವನ್ನು ಕತ್ತರಿಸಿ ಶವವನ್ನು ವಿಲೇವಾರಿ ಮಾಡಲು, ರಕ್ತದ ಕಲೆಗಳನ್ನು ತೆಗೆದುಹಾಕಲು ಮತ್ತು ಮಾನವ ದೇಹದ ರಚನೆಯನ್ನು ಕಂಡುಹಿಡಿಯಲು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದ. ಗೂಗಲ್‌ನಿಂದ ಮಾಹಿತಿ ಕಲೆಹಾಕಿದ ಬಳಿಕ ತನ್ನ ಫ್ಲಾಟ್‌ನ ಬಾತ್‌ರೂಮ್‌ನಲ್ಲಿದ್ದ ಶ್ರದ್ಧಾಳ ಮೃತದೇಹವನ್ನು ಗರಗಸದಿಂದ 35 ತುಂಡುಗಳಾಗಿ ಕತ್ತರಿಸಲು ನಿರ್ಧರಿಸಿದ್ದಾನೆ. ಇದಾದ ನಂತರ ಮೃತ ದೇಹವನ್ನು ಕತ್ತರಿಸಲು ಸುಲಭವಾಗುತ್ತದೆ ಎಂದು ಗೂಗಲ್‌ನಲ್ಲಿ ಮಾನವ ಅಂಗರಚನಾಶಾಸ್ತ್ರದ ಬಗ್ಗೆ ಹುಡುಕಿದ್ದಾನೆ. ಪೊಲೀಸರು ಅಫ್ತಾಬ್‌ನ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ವಶಪಡಿಸಿಕೊಂಡಿದ್ದು, ಈ ಎಲ್ಲ ಕರಾಳ ಸತ್ಯಗಳು ಬಯಲಾಗಿವೆ.