Select Your Language

Notifications

webdunia
webdunia
webdunia
webdunia

ಚುನಾವಣೆಯಿಂದ ದೂರ ಉಳಿದ ಅಜಂ ಖಾನ್ ಕುಟುಂಬ

ಚುನಾವಣೆಯಿಂದ ದೂರ ಉಳಿದ ಅಜಂ ಖಾನ್ ಕುಟುಂಬ
ಲಕ್ನೋ , ಗುರುವಾರ, 17 ನವೆಂಬರ್ 2022 (12:48 IST)
ಲಕ್ನೋ : 1977ರ ನಂತರ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮತ್ತು ಅವರ ಕುಟುಂಬಸ್ಥರು ರಾಮ್ಪುರ ವಿಧಾನಸಭಾ ಸ್ಥಾನ  ಚುನಾವಣೆಗೆ ಸ್ಪರ್ಧಿಸುತ್ತಿಲ್ಲ.

ದ್ವೇಷ ಭಾಷಣ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಜಂ ಖಾನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಬಳಿಕ ತೆರವಾದ ಸ್ಥಾನಕ್ಕೆ ಡಿಸೆಂಬರ್ 5 ರಂದು ಉಪಚುನಾವಣೆ ನಡೆಯಲಿದೆ.

ಸಮಾಜವಾದಿ ಪಕ್ಷವು ಅಜಂ ಖಾನ್ ಅವರ ಪತ್ನಿ ತಂಜೀನ್ ಫಾತಿಮಾ ಅಥವಾ ಅವರ ಸೊಸೆಯನ್ನು ಕಣಕ್ಕಿಳಿಸುತ್ತಿಲ್ಲ. ಬದಲಾಗಿ ಅಸೀಮ್ ರಜಾಗೆ ಟಿಕೆಟ್ ನೀಡಿದೆ. ಅಜಂ ಖಾನ್ ಅಥವಾ ಅವರ ಕುಟುಂಬಸ್ಥರು 1977 ರಿಂದ ಈ ಕ್ಷೇತ್ರದಿಂದ ನಿರಂತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬೆಸ್ಕಾಂ ಗ್ರಾಹಕರೇ ಎಚ್ಚರ ಎಚ್ಚರ ಎಚ್ಚರ..!