ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ನ ಬಿಂದು ಗೌಡ ಆಕ್ರೋಶ ಹೊರಹಾಕಿದ್ದಾರೆ.ಮೂರ್ಖ ಮುಠ್ಠಾಳ ಸಂಸದ ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.ಮೈಸೂರು ಬಸ್ ನಿಲ್ದಾಣ ವಿವಾದದ ಬಗ್ಗೆ ಬಿಂದು ಗೌಡ ಆಕ್ರೋಶ ಹೊರಹಾಕಿದ್ದು,ಮೈಸೂರು ಪ್ರಾಚೀನ ನಗರ.ಅಲ್ಲಿರುವ ಕಟ್ಟಡಗಳು ಸಾಂಪ್ರದಾಯಿಕವಾಗಿವೆ.ಕಟ್ಟಡಗಳ ಮುಂದೆ ನಿಂತು ಪೋಟೋ ತೆಗೆಸಿಕೊಳ್ತಾರೆ.ಫೋಟೋಗಾಗಿಯೇ ಪ್ರವಾಸಿಗರು ಇಲ್ಲಿಗೆ ಬರ್ತಾರೆ.ಅಂತಹ ವೈಶಿಷ್ಯಪೂರ್ಣ ಕಟ್ಟಡಗಳನ್ನ ಹೊಂದಿದೆ.ಗುಮ್ಮಟಗಳನ್ನ ನೀವು ಮಸೀದಿ ಅಂತ ಆರೋಪಿಸ್ತೀರಾ?ನೀವು ಮನೋವೈದ್ಯರನ್ನ ಭೇಟಿ ಮಾಡಿ.ಉತ್ತಮ ಚಿಕಿತ್ಸೆ ಪಡೆದುಕೊಳ್ಳಿ ಎಂದು ಬಿಂದುಗೌಡ ಆಕ್ರೋಶ ಹೊರಹಾಕಿದ್ದಾರೆ.