Select Your Language

Notifications

webdunia
webdunia
webdunia
webdunia

ಡಿಜಿಟಲ್ ಭಿಕ್ಷುಕ! ಕ್ಯೂಆರ್ ಕೋಡ್ ಹಿಡಿದು ಭಿಕ್ಷಾಟನೆ

ಡಿಜಿಟಲ್ ಭಿಕ್ಷುಕ! ಕ್ಯೂಆರ್ ಕೋಡ್ ಹಿಡಿದು ಭಿಕ್ಷಾಟನೆ
ಬೆಂಗಳೂರು , ಮಂಗಳವಾರ, 4 ಜುಲೈ 2023 (12:00 IST)
ಪ್ರತಿನಿತ್ಯ ನಾವು ಭಿಕ್ಷುಕರನ್ನು ಗಲ್ಲಿಗಲ್ಲಿಗಳಲ್ಲಿ ಎಲ್ಲೆಂದರಲ್ಲಿ ಕೊನೆಗೆ ರೈಲಿನಲ್ಲಿಯೂ ಕಾಣುತ್ತೇವೆ. ಅನೇಕ ಬಾರಿ ಭಿಕ್ಷುಕರು ನಾನಾ ರೀತಿಯಲ್ಲಿ ಭಿಕ್ಷೆ ಬೇಡುವುದನ್ನು ನೋಡುತ್ತೇವೆ.
 
ಸಾಮಾನ್ಯವಾಗಿ ಭಿಕ್ಷುಕರು ರೈಲುಗಳ ಸಾಮಾನ್ಯ ಬೋಗಿಗಳಲ್ಲಿ ಹಾಡುಗಳನ್ನು ಹಾಡುತ್ತಾ, ಭಿಕ್ಷೆ ಬೇಡುತ್ತಾರೆ. ಇಲ್ಲದಿದ್ದರೆ, ಭಿಕ್ಷುಕರು ಕೈಯಲ್ಲಿ ತಟ್ಟೆ ಅಥವಾ ಇತರ ಪಾತ್ರೆಗಳನ್ನು ಹಿಡಿದು ಭಿಕ್ಷೆ ಬೇಡುತ್ತಾರೆ.

ಇದು ಡಿಜಿಟಲ್ ಯುಗ ಅಲ್ಲವಾ!? ಅದಕ್ಕಾಗಿಯೇ ಭಿಕ್ಷುಕರೂ ಸಹ ಅಪ್ಗ್ರೇಡ್ ಆಗಿದ್ದಾರೆ. ಭಿಕ್ಷೆ ಬೇಡುವ ಶೈಲಿಯೂ ಬದಲಾಗಿದೆ. ಭಿಕ್ಷಾಟನೆಯು ಕಾಲಕ್ಕೆ ತಕ್ಕಂತೆ ಸಂಪೂರ್ಣವಾಗಿ ನವೀಕರಿಸಲ್ಪಟ್ಟಿದೆ. ಇತ್ತೀಚೆಗೆ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಒಬ್ಬ ಭಿಕ್ಷುಕನು ವಿಭಿನ್ನವಾಗಿ ಭಿಕ್ಷೆ ಬೇಡುತ್ತಿರುವುದು ಕಂಡುಬರುತ್ತದೆ.

ಆ ವೈರಲ್ ವಿಡಿಯೋದಲ್ಲಿ, ಭಿಕ್ಷುಕನೊಬ್ಬ ತನ್ನ ಕೈಯಲ್ಲಿ ಕ್ಯೂಆರ್ ಕೋಡ್ ಬೋರ್ಡ್ ಹಿಡಿದು ಜನರ ಬಳಿ ಭಿಕ್ಷೆ ಬೇಡುತ್ತಾನೆ. ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಆ ವ್ಯಕ್ತಿ ಭಿಕ್ಷೆ ಬೇಡುವ ವರ್ತನೆಯನ್ನು ವಿಡಿಯೋ ಮೂಲಕ ದಾಖಲಿಸಿದ್ದಾರೆ. ಇದೀಗ ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸಾಮಾನ್ಯವಾಗಿ ಭಿಕ್ಷುಕರು ಬೇಡಿದಾಗ ದಾನದ ರೂಪದಲ್ಲಿ ಕೆಲವರು ತಿನ್ನಲು ಏನಾದರೂ ಕೊಡುತ್ತಾರೆ. ಅಥವಾ ನಗದು ರೂಪದಲ್ಲಿ ಒಂದಷ್ಟು ಹಣ ಕೊಟ್ಟು ಕಳುಹಿತ್ತಾರೆ.

ಕ್ಯೂಆರ್ ಕೋಡ್ ಹಿಡಿದುಕೊಂಡು ರಸ್ತೆಬದಿಯಲ್ಲಿ ನಿಂತಿರುವ ಭಿಕ್ಷುಕರ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸದ್ಯ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಮೂಹಿಕ ಗುಂಡಿನ ದಾಳಿಗೆ ಮಕ್ಕಳು ಸೇರಿ ನಾಲ್ವರು ಬಲಿ