Select Your Language

Notifications

webdunia
webdunia
webdunia
webdunia

ಬೆಸ್ಕಾಂ ಡಿಜಿಟಲ್ ಮೀಟರ್ ಆಳವಡಿಕೆ - ದುಬಾರಿ ಕರೆಂಟ್ ಬಿಲ್

ಬೆಸ್ಕಾಂ ಡಿಜಿಟಲ್ ಮೀಟರ್ ಆಳವಡಿಕೆ - ದುಬಾರಿ ಕರೆಂಟ್ ಬಿಲ್
bangalore , ಭಾನುವಾರ, 26 ಫೆಬ್ರವರಿ 2023 (17:51 IST)
ಬೆಸ್ಕಾಂ ಅಳವಡಿಸುತ್ತಿರುವ ಡಿಜಿಟಲ್ ಮೀಟರ್​​​ಗಳು ಜನರಿಗೆ ಬರೆ ಎಳೆಯುತ್ತಿವೆ ಎಂಬ ಆರೋಪಗಳು ಕೇಳಿ ಬಂದಿದೆ. ಬೆಸ್ಕಾಂ ಸಂಸ್ಥೆ ತಮ್ಮ ಗ್ರಾಹಕರ ಮನೆಗಳಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಮೀಟರ್​​ಗಳನ್ನು ಡಿಜಿಟಲ್ ಮೀಟರ್​​​ಗಳನ್ನಾಗಿ ಪರಿವರ್ತನೆ ಮಾಡುವ ಕಾರ್ಯವನ್ನು ಹಮ್ಮಿಕೊಂಡಿದೆ. ಈಗಾಗಲೆ ನಗರದ ಶೇ.60ರಷ್ಟು ಮನೆಗಳಲ್ಲಿ ಡಿಜಿಟಲ್ ಮೀಟರ್ ಆಳವಡಿಸುವ ಕಾರ್ಯವನ್ನು ಪೂರ್ಣಗೊಳಿಸಿದೆ. ಡಿಜಿಟಲ್ ಮೀಟರ್‍ಗಳನ್ನು ಅಳವಡಿಸಿದ ನಂತರ ಈ ಹಿಂದೆ ಬರುತ್ತಿದ್ದ ವಿದ್ಯುತ್ ಬಿಲ್ ದುಪ್ಪಟ್ಟಾಗಿದ್ದು, ಡಿಜಿಟಲ್ ಮೀಟರ್‍ಗಳು ಜನರ ಜೇಬಿಗೆ ದುಬಾರಿಯಾಗುತ್ತಿವೆ ಎಂಬ ಬಗ್ಗೆ ದೂರುಗಳು ದಾಖಲಾಗುತ್ತಿವೆ. ಡಿಜಿಟಲ್ ಮೀಟರ್ ಅಳವಡಿಕೆ ನಂತರ ಈ ಹಿಂದೆ 500 ರೂ ಬರ್ತಿದ್ದ ಬಿಲ್ ಇದೀಗ 1000 ರೂ.ಗಳಿಗೆ ಏರಿಕೆಯಾಗುತ್ತಿದೆ. ಡಿಜಿಟಲ್ ಮೀಟರ್‍ಗಳಿಂದ ಬಿಲ್ ದುಪ್ಪಟ್ಟಾಗಿ ಬರುತ್ತಿರುವ ಬಗ್ಗೆ ಇದುವರೆಗೂ 70 ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಕಳೆದ 6 ತಿಂಗಳುಗಳಿಂದ ಗ್ರಾಹಕರು ದೂರಿನ ಮೇಲೆ ದೂರು ನೀಡುತ್ತಿದ್ದರೂ ಬೆಸ್ಕಾಂ ಸಂಸ್ಥೆಯವರು ಮಾತ್ರ ಅದಕ್ಕೂ ನಮಗೂ ಸಂಬಂಧವಿಲ್ಲದ್ದಂತೆ ಸುಮ್ಮನಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಫ್ಲೆಕ್ಸ್ ಬ್ಯಾನರ್ ಹಾಕುವವರ ವಿರುದ್ಧ ಕ್ರಮ- ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್