Select Your Language

Notifications

webdunia
webdunia
webdunia
webdunia

ಜೆಲ್ಲಿ ಚಾಕಲೇಟ್ ಸೇವಿಸುವ ಮುನ್ನ ಹುಷಾರ್

Jelly chocolate

Krishnaveni K

ಬೆಂಗಳೂರು , ಶನಿವಾರ, 28 ಜೂನ್ 2025 (14:20 IST)
Photo Credit: X
ಬೆಂಗಳೂರು: ಮಕ್ಕಳು ಇಷ್ಟಪಡುತ್ತಾರೆ ಎಂದು ಜೆಲ್ಲಿ ಚಾಕಲೇಟ್ ಕೊಡಿಸುವ ಮುನ್ನ ಹುಷಾರ್. ಈಗ ಬೆಂಗಳೂರಿಗೂ ಜೆಲ್ಲಿ ಚಾಕಲೇಟ್ ಮೂಲಕ ಗಾಂಜಾ ಮಾರಾಟ ಮಾಡುವ ಜಾಲ ಬಂದಿದೆ.

ಮೆಡಿಕಲ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಜೆಲ್ಲಿ ಚಾಕಲೇಟ್ ಗೆ ಗಾಂಜಾ ಮಿಕ್ಸ್ ಮಾಡಿ ಕೊಡಲಾಗುತ್ತಿದೆ. ಈಗಾಗಲೇ ಬ್ಯಾಟರಾಯನಪುರ ಪೊಲೀಸರು ಈ ಬಗ್ಗೆ ಮಾಹಿತಿ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು 1440 ಗ್ರಾಂ ಜೆಲ್ಲಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಮೊಹಮ್ಮದ್ ಜಾಹೀದ್ ಮತ್ತು ಇಸ್ಮಾಯಿಲ್ ಅದ್ನಾನ್ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಈಗ ಬೆಳಕಿಗೆ ಬಂದಿರುವುದು ಇವರಿಬ್ಬರೇ. ಗೊತ್ತಿಲ್ಲದೇ ಇನ್ನೆಷ್ಟು ಜನ ಈ ಜಾಲದಲ್ಲಿದ್ದಾರೆ ಎಂದು ತನಿಖೆಯಿಂದಷ್ಟೇ ತಿಳಿಯಬೇಕಿದೆ.

ಒಂದು ಪ್ಯಾಕೆಟ್ ಜೆಲ್ಲಿ ಚಾಕಲೇಟ್ ನ್ನು 6 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಒಮ್ಮೆ ತಿಂದರೆ ನಶೆ ಏರುತ್ತದೆ. ಈ ರೀತಿ ಅದೆಷ್ಟು ಮಕ್ಕಳ ಭವಿಷ್ಯ ಹಾಳು ಮಾಡುತ್ತಾರೋ. ಹೀಗಾಗಿ ಎಚ್ಚರಿಕೆಯಿಂದಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಇಲ್ಲದಿದ್ದರೆ ನಾನಿಲ್ಲ: ಕೆಎನ್ ರಾಜಣ್ಣ