Publish Date: Sat, 07 Jun 2025 (17:01 IST)
Updated Date: Sat, 07 Jun 2025 (17:04 IST)
ಬೆಂಗಳೂರು: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪತ್ನಿಯನ್ನೇ ಕೊಲೆಗೈದು, ಕತ್ತರಿಸಿದ ತಲೆಯನ್ನು ಪೊಲೀಸ್ ಠಾಣೆಗೆ ಕೊಂಡೊಯ್ದು ಪತಿ ಶರಣಾಗಿರುವ ಆತಂಕಕಾರಿ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ವರದಿಯಾಗಿದೆ.
ಬೆಂಗಳೂರಿನ ಆನೇಕಲ್ ಪ್ರದೇಶದಲ್ಲಿ 28 ವರ್ಷ ಶಂಕರ್ ಎಂಬಾತ ಪತ್ನಿ ಮಾನಸಾಳ ಶಿರಚ್ಛೇದನ ಮಾಡಿದ್ದಾನೆ.
ಪತ್ನಿಯ ಅನೈತಿಕ ಸಂಬಂಧ ಹಿನ್ನೆಲೆ ಶಂಕರ್ ಆಕೆಯ ಜತೆ ಜಗಳವಾಡಿದ್ದಾನೆ. ಕೋಪ ಅತೀರೇಕಕ್ಕೆ ತಿರುಗೆ ಆಕೆಯ ತಲೆಯನ್ನು ಕಡಿದು ಕೊಲೆ ಮಾಡಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ, ಶಂಕರ್ ಮತ್ತು ಮಾನಸಾ ವಿವಾಹಿತ ದಂಪತಿಗಳಾಗಿದ್ದಾರೆ. ಕೆಲವು ಸಮಯದ ಹಿಂದೆ, ಅವರು ಹೀಲಲಿಗೆ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿ ವಾಸವಾಗಿದ್ದರು. ಕೆಲಸಕ್ಕೆ ಹೋದ ಶಂಕರ್ ಜೂನ್ 3ರ ರಾತ್ರಿ ಮನೆಗೆ ವಾಪಾಸ್ಸಾಗುವುದಾಗಿ ಹೇಳಿದ್ದಾನೆ.
ಆದಾಗ್ಯೂ, ಆ ರಾತ್ರಿ ಕೆಲಸ ಮುಗಿಸಿ ಅನಿರೀಕ್ಷಿತವಾಗಿ ಮನೆಗೆ ಮರಳಿದಾಗ, ಮಾನಸಾ ಇನ್ನೊಬ್ಬ ವ್ಯಕ್ತಿಯೊಂದಿಗೆ ಇರುವುದು ಕಂಡುಬಂದಿದೆ ಎಂದು ಆರೋಪಿಸಲಾಗಿದೆ. ಜಗಳ ನಡೆದು ಮಾನಸಾ ಮನೆಯಿಂದ ಹೊರಗೆ ಹೋಗಿದ್ದಾಳೆ.
ನಂತರದ ದಿನಗಳಲ್ಲಿ, ಮಾನಸಾ ಹಲವು ಬಾರಿ ಮನೆಗೆ ಹಿಂತಿರುಗಿ ಶಂಕರ್‌ಗೆ ಕಿರುಕುಳ ನೀಡಿದ್ದಾಳೆ ಎಂದು ದೂರು ನೀಡಲಾಗಿದೆ. ಪದೇ ಪದೇ ಕಿರುಕುಳ ನೀಡುತ್ತಿದ್ದರಿಂದ ಕೋಪಗೊಂಡ ಶಂಕರ್, ಮಾನಸಾಳ ಶಿರಚ್ಛೇದ ಮಾಡಿ, ನಂತರ ಆಕೆಯ ಕತ್ತರಿಸಿದ ತಲೆಯೊಂದಿಗೆ ಸೂರ್ಯನಗರ ಪೊಲೀಸ್ ಠಾಣೆಗೆ ಹೋಗಿ ಅಧಿಕಾರಿಗಳಿಗೆ ಶರಣಾದರು.
ಸೂರ್ಯನಗರ ಠಾಣೆಯ ಪೊಲೀಸ್ ಸಿಬ್ಬಂದಿ ಅಪರಾಧ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದರು. ಶಂಕರ್ ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.